ಹಂದಟ್ಟು : ಮಯ್ಯ ಯಕ್ಷ ಬಳಗ ಹಾಲಾಡಿ, ವಿವಾಹ ಸಂಪರ್ಕ ವೇದಿಕೆ, ಗೆಳೆಯರ ಬಳಗ ಯುವಕ ಸಂಘ (ರಿ.), ದಾನಗುಂದು ಹಂದಟ್ಟು, ಬಾರಿಕೆರೆ ಯುವಕ ಮಂಡಲ (ರಿ.) ಮತ್ತು ಅಭಿಮಾನ್ ಫ್ರೆಂಡ್ಸ್ ನಾಗಬನ ಹಂದಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಸಮಾಜಮುಖಿ ಬದುಕಿನ ಸಂತೃಪ್ತ ಸಾಧಕ ಯಕ್ಷಾರಾಧಕ ಹಂದಟ್ಟು ಸೂರ್ಯನಾರಾಯಣ ಉರಾಳ ಇವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 01-05-2024ರಂದು ಸಂಜೆ 7.00ರಿಂದ ಉರಾಳರಕೇರಿ ಹಂದಟ್ಟು ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಉಪನ್ಯಾಸಕರಾದ ಶ್ರೀ ಬಾಲಕೃಷ್ಣ ನಕ್ಷತ್ರಿ ಮತ್ತು ನಿವೃತ್ತ ಅಧ್ಯಾಪಕರಾದ ಶ್ರೀ ಶ್ರೀಪತಿ ಹೇರ್ಳೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದ್ದು, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕೆ.ಎಸ್. ಕಾರಂತರು ಅಧ್ಯಕ್ಷತೆಯನ್ನು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕಲ್ಲೂರ, ಅಮೃತೇಶ್ವರೀ ದೇವಸ್ಥಾನ ಮತ್ತು ಮೇಳದ ವ್ಯವಸ್ಥಾಪಕರಾದ ಶ್ರೀ ಆನಂದ್ ಸಿ. ಕುಂದರ್, ಹಿರಿಯ ಕಲಾ ಸಾಹಿತಿಯಾದ ಶ್ರೀ ಜನಾರ್ಧನ ಹಂದೆ ಹಂದಟ್ಟು, ಗೋಳಿಗರಡಿ ಮೇಳದ ಮಾಜಿ ಯಜಮಾನರಾದ ಶ್ರೀ ಸುರೇಂದ್ರ ಪಣಿಯೂರು, ಹಾಲಿ ಯಜಮಾನರಾದ ಶ್ರೀ ವಿಠ್ಠಲ ಪೂಜಾರಿ ಮತ್ತು ಸಾಲಿಗ್ರಾಮ ಕೂಟ ಮಹಾಜಗತ್ತು (ರಿ.) ಇದರ ಅಧ್ಯಕ್ಷರಾದ ಶ್ರೀ ಸತೀಶ ಹಂದೆ ಇವರುಗಳು ಭಾಗವಹಿಸಲಿರುವರು.
ಅಂದು ನಡೆಯಲಿರುವ ಇಡೀ ದಿನದ ಅದ್ದೂರಿ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12-00ರಿಂದ ‘ಯಕ್ಷ-ಗಾನ-ವೈಭವ’ದಲ್ಲಿ ಭಾಗವತರಾಗಿ ಚಂದ್ರಕಾಂತ್ ರಾವ್ ಮೂಡುಬೆಳ್ವೆ, ಪ್ರಸನ್ನ ಭಟ್ ಬಾಳ್ಕ್ಲ್, ಲಂಬೋದರ ಹೆಗಡೆ ನಿಟ್ಟೂರು, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಶಿವಾನಂದ ಕೋಟ, ಸುದೀಪ್ ಉರಾಳ ಭಾಗವಹಿಸಲಿದ್ದಾರೆ. ನಂತರ ಸಂಜೆ 7-30ರಿಂದ ಬೆಂಗಳೂರಿನ ಪ್ರಸಿದ್ಧ ತಂಡವಾದ ‘ಯಕ್ಷದೇಗುಲ’ ತಂಡದವರಿಂದ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಲಾವಿದರಾಗಿ ರಾಘವೇಂದ್ರ ಮಯ್ಯ ಹಾಲಾಡಿ, ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಜನಾರ್ದನ ಆಚಾರ್, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ದಿನೇಶ ಕನ್ನಾರ್, ಸ್ಫೂರ್ತಿ ಭಟ್, ಜಯರಾಮ ಕೊಠಾರಿ, ಉದಯ ಭೋವಿ, ರಾಜು ಪೂಜಾರಿ ಇನ್ನೀತರರು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮದ ನಿರೂಪಣೆ ಉಪನ್ಯಾಸಕ ರಾಘವೇಂದ್ರ ತುಂಗರವರು ಮಾಡಲಿದ್ದಾರೆ.