ಕಾಸರಗೋಡು : ಹಿರಿಯ ಸಾಹಿತಿ, ಸಂಘಟಕ ಪ್ರೊ. ಪಿ.ಎನ್. ಮೂಡಿತ್ತಾಯ ಮತ್ತು ಶಕುಂತಲಾ ದಂಪತಿಯನ್ನು ಬೆಂಗಳೂರಿನ ಶಂಪಾ ಪ್ರತಿಷ್ಠಾನದ ವತಿಯಿಂದ ಬಾಯಿಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ದಿನಾಂಕ 26-01-2024ರಂದು ಸನ್ಮಾನಿಸಿ ಗೌರವಿಸಲಾಯಿತು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ವಸಂತ ಕುಮಾರ್ ಪೆರ್ಲ ಅಭಿನಂದನ ಭಾಷಣವನ್ನು ಮಾಡಿದರು. ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ಶುಭ ಹಾರೈಸಿದರು. ಶಂಪಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಸ್.ಎಲ್. ಮಂಜುನಾಥ್ ಪ್ರಮಾಣ ಪತ್ರವನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳ ಮಾಧವ ಸ್ವಾಗತಿಸಿ, ಡಾ. ರಾಧಾಕೃಷ್ಣ ಬೆಳ್ಳೂರು ವಂದಿಸಿದರು.
ಇದೇ ಸಂದರ್ಭದಲ್ಲಿ ಗುರುಗಳಾದ ಪ್ರೊ. ಪಿ.ಎನ್. ಮೂಡಿತ್ತಾಯಾರ ಬಗ್ಗೆ ಡಾ. ಪ್ರಮೀಳ ಮಾಧವ ಬರೆದ ‘ಸದ್ದಿಲ್ಲದ ಸಾಧಕ’ ಎಂಬ ಪುಸ್ತಕವನ್ನು ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್ ಬಿಡುಗಡೆಗೊಳಿಸಿದರು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಟಿ.ಎ.ಎನ್. ಖಂಡಿಗೆ ಕೃತಿ ಪರಿಚಯವನ್ನು ಮಾಡಿದರು. ಮೂಡಿತ್ತಾಯರ ಹಾಸ್ಯ ಸಾಹಿತ್ಯದ ಬಗ್ಗೆ ಹಿರಿಯ ಕವಿ ಬಾಲ ಮಧುರಕಾನನ, ಅನುವಾದಗಳ ಬಗ್ಗೆ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಪ್ರವೀಣ ಪದ್ಯಾಣ, ಕಾವ್ಯದ ಬಗ್ಗೆ ಡಾ. ಮೀನಾಕ್ಷಿ ರಾಮಚಂದ್ರ, ಎಂ.ಫಿಲ್ ಕೃತಿಯ ಬಗ್ಗೆ ಯುವ ಸಾಹಿತಿ, ವಿಮರ್ಶಕ ಡಾ. ಸುಭಾಷ್ ಪಟ್ಟಾಜೆ ಪ್ರಬಂಧಗಳನ್ನು ಮಂಡಿಸಿದರು. ಡಾ. ಕಿಶೋರ್ ಕುಮಾರ್ ಶೇಣಿ ನಿರೂಪಿಸಿದರು.
ನಂತರ ನಡೆದ ಸಂವಾದದಲ್ಲಿ ಡಾ. ಯು. ಮಹೇಶ್ವರಿ, ಡಾ. ಎಸ್.ಎಲ್. ಮಂಜುನಾಥ್, ಡಾ. ಮೋಹನ ಕುಂಟಾರ್, ಡಾ. ವೇದಾವತಿ, ಪ್ರೊ. ಶ್ರೀನಾಥ್, ಮಹಾಲಿಂಗೇಶ್ವರ ಸೂರಂಬೈಲು, ವಿಶಾಲಾಕ್ಷ ಪುತ್ರಕಳ, ಸದಾನಂದ ಬೆಂಗಳೂರು, ಲಕ್ಷ್ಮಿ ಕೆ. ಭಾಗವಹಿಸಿದರು. ಡಾ. ಸುಭಾಷ್ ಪಟ್ಟಾಜೆ ನಿರೂಪಿಸಿದರು.