ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಆಯೋಜಿಸಿದ ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಸಾಹಿತಿ ಬಿ. ಸುಲೋಚನಾ ಇವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 04 ಫೆಬ್ರವರಿ 2025 ರಂದು ಮಂಗಳೂರಿನ ಉರ್ವ ಪರಿಸರದ ಅವರ ನಿವಾಸದಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ನನ್ನ ಕಿಂಚಿತ್ ಸಾಹಿತ್ಯ ಸೇವೆಯನ್ನು ಗುರುತಿಸಿ ಮನೆಗೇ ಬಂದು ಸಮ್ಮಾನ ಮಾಡಿದ್ದು ಮನ ಮುಟ್ಟಿದೆ, ಇದಕ್ಕಿಂತ ಸಂತೋಷ ಸಮಾಧಾನ ಬೇರೆಯಿಲ್ಲ. ಕವಿ ಕಯ್ಯಾರರ ವಿದ್ಯಾರ್ಥಿಯಾಗಿದ್ದು, ಅವರ ಪ್ರೇರಣೆಯಿಂದ ಬರೆಯಲು ಆರಂಭಿಸಿದ್ದರೂ ನಿವೃತ್ತಿಯ ಬಳಿಕವಷ್ಟೇ ಮೂರು ಕೃತಿಗಳನ್ನು ಹೊರ ತರಲು ಸಾಧ್ಯವಾಗಿದೆ. ಮನೆಯವರ, ಬಂಧುಗಳ ಸಹಕಾರ ಮತ್ತು ಮಂಗಳೂರಿನ ಸಾಹಿತ್ಯಿಕ ವಾತಾವರಣ ಹೆಚ್ಚಿನ ಖುಷಿ ನೀಡಿದೆ” ಎಂದರು.
ಘಟಕದ ಪದಾಧಿಕಾರಿ ಹಾಗೂ ಕ. ಸಾ. ಪ. ವಿದೇಶೀ ರಾಯಭಾರಿ ಡಾ. ಮುರಲೀಮೋಹನ್ ಚೂಂತಾರು ಸುಲೋಚನಾ ಅವರನ್ನು ಅಭಿನಂದಿಸಿ ಮಾತನಾಡಿ “ಎಲೆ ಮರೆಯ ಸಾಧಕರನ್ನು ಗುರುತಿಸುವುದು ಹಾಗೂ ಹಿರಿಯರನ್ನು ಇಂದಿನ ಯುವ ಜನತೆಗೆ ಪರಿಚಯಿಸಿ ಪ್ರೇರಣೆ ನೀಡುವುದು ನಮ್ಮ ಮನೆ ಮನೆ ಭೇಟಿ ಕಾರ್ಯಕ್ರಮದ ಉದ್ದೇಶ ಇದರಿಂದ ಸಿಗುವ ತೃಪ್ತಿ ಅವರ್ಣನೀಯ ಎಂದು ವಿವರಿಸಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಶುಭ ನುಡಿದರು.
ಜಿಲ್ಲಾ ಸಮಿತಿಯ ಅರುಣಾ ನಾಗರಾಜ್ , ಸನತ್ ಕುಮಾರ್ ಜೈನ್ ಅಲ್ಲದೆ ಘಟಕದ ರತ್ನಾವತಿ ಜೆ. ಬೈಕಾಡಿ , ಡಾ. ಮೀನಾಕ್ಷಿ ರಾಮಚಂದ್ರ , ಗುರು ಪ್ರಸಾದ್ , ಸುಲೋಚನಾ ಅವರ ಪತಿ ಪುರುಷೋತ್ತಮ ರಾವ್ , ಸೊಸೆ ಲತಾ ಎಸ್. ರಾವ್ , ಮೊಮ್ಮಗಳು ಸಂಜನಾ , ಬಂಧುಗಳಾದ ಪ್ರೇಮಾ ಸೀತಾರಾಮ್ , ನಿವೃತ್ತ ಶಿಕ್ಷಕಿ ರತ್ನಾವತಿ , ವಿದ್ಯಾ ಆರ್ ರಾವ್ ಉಪಸ್ಥಿತರಿದ್ದರು.
ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Previous Articleಲಕ್ಷ್ಮೀ ಗುರುರಾಜ್ ಎನ್.ಎನ್.ಯು. (ರಿ.) ಸಂಸ್ಥೆಯ ಪಂಚ ತ್ರಿಂಶತ್ ಉತ್ಸವ
Next Article ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನಸಂಕಲನಗಳ ಆಹ್ವಾನ