ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಏರ್ಪಡಿಸಿದ್ದ ‘ಯಕ್ಷ ತ್ರಿವೇಣಿ’ ಕಾರ್ಯಕ್ರಮವನ್ನು ದಿನಾಂಕ 01-02-2024ರಂದು ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟಿಸಿದರು. ಅವರು ಮಾತನಾಡಿ “ಯಕ್ಷಗಾನಕ್ಕೆ ಜಾನಪದೀಯ-ಪಾರಂಪರಿಕ ಸೊಗಡಿದೆ. ಅದನ್ನು ಬೆಳೆಸಲು ಹಿಂದಿನವರು ಬಹಳ ಪ್ರಯತ್ನಿಸಿದ್ದಾರೆ. ಅದನ್ನು ಉಳಿಸಿ ಬೆಳೆಸುವಲ್ಲಿ ದಿ. ಲಕ್ಮೀನಾರಾಯಣ ಅಲೆವೂರಾಯರಂತಹಾ ಕಲಾವಿದರು ಬಹಳ ಕೊಡುಗೆ ಕೊಟ್ಟಿದ್ದಾರೆ. ಅಂತಹವರ ಸಂಸ್ಮರಣೆಯನ್ನು ಅಲೆವೂರಾಯ ಸಹೋದರರು ಮಾಡುತ್ತಾ ಬರುತ್ತಿದ್ದಾರೆ. ಈ ಏಳನೇ ವರ್ಷದಲ್ಲೂ ಹಿರಿಯರನ್ನು ಗೌರವಿಸುವ ಕಾರ್ಯ ಸ್ತುತ್ಯರ್ಹ. ಅದಕ್ಕೆ ನಮ್ಮ ಕಡೆಯಿಂದ ಸಂಪೂರ್ಣ ನೆರವು ನೀಡುತ್ತೇವೆ” ಎಂದು ನುಡಿದರು.
“ಶ್ರೀಕ್ಷೇತ್ರ ಶರವು ಎಲ್ಲಾ ಕಾರ್ಯಕ್ರಮಗಳಿಗೆ ತವರು ಮನೆ, ಯಕ್ಷಗಾನ – ನಾಟಕ- ಸಿನಿಮಾವೇ ಮೊದಲಾದ ಕಾರ್ಯಕ್ರಮಕ್ಕೆ ಶುಭಾರಂಭಿಕ ಆಶ್ರಯ ತಾಣ. ಶಾಸ್ತ್ರಗಳು ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲದಕ್ಕೂ ಮಾರ್ಗದರ್ಶನ ಮಾಡಿ ಹರಸುತ್ತಾರೆ. ಅವರ ಉದಾರತೆ, ಕಲೆಯ ಮೇಲಿನ ಪ್ರೀತಿ ಅಲೆವೂರಾಯ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅವರನ್ನು ಸನ್ಮಾನಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಪ್ರತಿಷ್ಠಾನದ ಈ ಬಾರಿಯ ಮೊದಲ ದಿನದ ಕಾರ್ಯಕ್ರಮದಲ್ಲಿ ರಾಘವೇಂದ್ರ ಶಾಸ್ತ್ರಿಗಳನ್ನು ಸನ್ಮಾನಿಸುತ್ತಾ ಡಾ. ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಶ್ರೀಸುಧಾಕರ ರಾವ್ ಪೇಜಾವರರು ಸ್ವಾಗತ ಪ್ರಸ್ತಾವನೆ ನಡೆಸಿದರು. ವರ್ಕಾಡಿ ಮಧುಸೂದನ ಅಲೆವೂರಾಯರ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಪೂರ್ಣಿಮಾ ಪ್ರಭಾಕರ ಪೇಜಾವರರು ಧನ್ಯವಾದವಿತ್ತರು. ಶ್ರೀಮತಿ ಪೂರ್ಣಿಮಾ ಶಾಸ್ತ್ರಿ, ನ್ಯಾಯವಾದಿ ಶ್ರೀಗೋಪಾಲಕೃಷ್ಣ ಭಟ್, ಪ್ರಭಾಕರ ರಾವ್ ಪೇಜಾವರ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸರಯೂ ಯಕ್ಷ ಬಳಗದಿಂದ ‘ವೀರ ಕುಶ-ಲವ’ ಎಂಬ ಬಯಲಾಟ ಜರಗಿತು.
ದಿನಾಂಕ 01-02-2024ರಂದು ನಡೆದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ.ಸಾ.ಪ. ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀ ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡುತ್ತಾ “ಯಕ್ಷಗಾನದಂತಹಾ ರಂಗಭೂಮಿಗೆ ಈ ಕಾಲಘಟ್ಟದಲ್ಲಿ ಎಲ್ಲಾ ಸ್ತರದ ವ್ಯಕ್ತಿಗಳೂ ವಯೋಮಾನದವರೂ ಆಕರ್ಷಿಸಲ್ಪಡುತ್ತಾರೆ. ಯಕ್ಷಕಲೆಗೆ ಆ ರೀತಿಯ ಮಾನ – ಸಮ್ಮಾನಗಳು ವಿಶ್ವದೆಲ್ಲೆಡೆ ದೊರೆಯುತ್ತಿವೆ. ಪೂರ್ವ ಸೂರಿಗರ ಕೈಯ್ಯಿಂದ ಪಂಡಿತ-ಪಾಮರರ ಬಳಿಗೂ ಅದು ವ್ಯಾಪಿಸಿದೆ. ಇಂತಹಾ ಶ್ರೀಮಂತ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಶಾರದಾ ವಿದ್ಯಾಲಯದ ನಾಲ್ಕನೇ ತರಗತಿಯ ಯಕ್ಷ ವಿದ್ಯಾರ್ಥಿ ಅದ್ವಿತ್ ನನ್ನು ಅಲೆವೂರಾಯ ಪ್ರತಿಷ್ಠಾನದ ವತಿಯಿಂದ ಪುರಸ್ಕರಿಸುವುದು ಸ್ತುತ್ಯರ್ಹ ಕಾರ್ಯ. ಇದು ಎಲ್ಲೆಡೆ ನಡೆಯಲಿ. ಕಲ್ಕೂರ ಪ್ರತಿಷ್ಠಾನದ ಬೆಂಬಲ ಸದಾ ಈ ಸಂಘಟನೆಗಿದೆ” ಎಂದು ಹೇಳಿದರು.
ಡಾ. ಹರಿಕೃಷ್ಣ ಪುನರೂರು, ಶರವು ಶ್ರೀ ರಾಘವೇಂದ್ರ ಶಾಸ್ತ್ರೀಗಳು, ವರ್ಕಾಡಿ ಮಾಧವ ನಾವಡ ಅತಿಥಿಗಳಾಗಿ ಭಾಗವಹಿಸಿ ಮಾ. ಅದ್ವಿತ್ ಪಿ. ಗೌಡನಿಗೆ ಶುಭ ಕೋರಿದರು. ಸಂಘಟಕ ಶ್ರೀ ಸುಧಾಕರ ರಾವ್ ಪ್ರಸ್ತಾವನೆ ಮಾಡಿ ಬಾಲಕನನ್ನು ಅಭಿನಂದನಾ ಮಾತುಗಳಿಂದ ಪ್ರೋತ್ಸಾಹಿಸಿದರು. ಮಧುಸೂದನ ಅಲೆವೂರಾಯರು ಧನ್ಯವಾದವಿತ್ತರು. ಬಳಿಕ ‘ವೀರ ಮಾತೆ ಭದ್ರಕಾಳಿ’ ಎಂಬ ಪೌರಾಣಿಕ ಪ್ರಸಂಗ ಪ್ರದರ್ಶನಗೊಂಡಿತು.
ದಿನಾಂಕ 01-02-2024ರಂದು ನಡೆದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶರವು ಕ್ಷೇತ್ರದ ಡಾ. ಸುದೇಶ್ ಶಾಸ್ತ್ರಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶರವು ಶ್ರೀ ರಾಘವೇಂದ್ರ ಶಾಸ್ತ್ರೀಗಳು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಲೀಲಾವತಿ ಬೈಪಾಡಿತ್ತಾಯರನ್ನು ಸನ್ಮಾನಿಸಿದ ಪ್ರತಿಷ್ಠಾನದ ಗೌರವ ಸಂಚಾಲಕರಾದ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಯಕ್ಷಗಾನದ ಮಡಿವಂತಿಕೆಯ ಮಧ್ಯೆಯೂ ಮಹಿಳಾ ಭಾಗವತಿಕೆಯ ಕಂಪನ್ನು ಪಸರಿಸಿದ ಏಕೈಕ ಮಹಿಳೆ ಲೀಲಾವತಿ ಬೈಪಾಡಿತ್ತಾಯರು. ಅವರು ಹರಿನಾರಾಯಣ ಬೈಪಾಡಿತ್ತಾಯರಿಂದಲೇ ಭಾಗವತಿಕೆಯನ್ನು ಅಭ್ಯಸಿಸಿ ಅಮೋಘ ಸಾಧನೆ ಮಾಡಿದ ಪ್ರಪ್ರಥಮ ಮಹಿಳಾ ಭಾಗವತರಾಗಿ ಇತಿಹಾಸ ಸೃಷ್ಟಿಸಿದ ಯಕ್ಷರಂಗದಲ್ಲಿ ಕ್ರಾಂತಿಕಾರಿ ಹೆಚ್ಚೆಯಿರಿಸಿದವರು. ಯಕ್ಷಗಾನವನ್ನು ಅತ್ಯಂತ ಪ್ರೀತಿಸುತ್ತಿರುವ ಲೀಲಾವತಿ ಬೈಪಾಡಿತ್ತಾಯರಿಗೆ ಹಲವು ಪ್ರಸಂಗಗಳು ಕಂಠಸ್ಥವಾಗಿದ್ದವು. ಅನೇಕ ಹಿರಿ-ಕಿರಿಯ ಕಲಾವಿದರ ಒಡನಾಟ ಇವರಿಗಿತ್ತು. ಇಂದು ಅಲೆವೂರಾಯ ಪ್ರತಿಷ್ಠಾನದ ಯಕ್ಷ ತ್ರಿವೇಣಿಯ ಸಂದರ್ಭ ಅವರನ್ನು ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ” ಎಂದು ನುಡಿದರು.
ಯಕ್ಷಗಾನ ಕಲಾವಿದ ಕುಕ್ಕುವಳ್ಳಿ ಭಾಸ್ಕರ ರೈಗಳು ಹರಿನಾರಾಯಣ ಮತ್ತು ಲೀಲಾವತಿ ಬೈಪಾಡಿತ್ತಾಯರವರನ್ನು ಅಭಿನಂದಿಸಿ ಅಬ್ಬಕ್ಕ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದು ಯುಕ್ಷರಂಗವನ್ನು ನಿರ್ದೇಶಿಸಿ ಆಟವಾಡಿಸಿದವರು. ಲೀಲಾವತಿ ಬೈಪಾಡಿತ್ತಾಯರು ಇವರಿಗೆ ಗೌರವಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ” ಎಂದರು
ಶ್ರೀಮತಿ ಸುಭದ್ರಾ ದೇವಿ, ವರ್ಕಾಡಿ ಮಾಧವ ನಾವಡ ಉಪಸ್ಥಿತರಿದ್ದರು. ಸಂಘಟಕ ಶ್ರೀ ಸುಧಾಕರ ರಾವ್ ಪೇಜಾವರ್ ನಿರ್ವಹಿಸಿದರು. ಪ್ರತಿಷ್ಠಾನದ ವಿಶ್ವಸ್ವ ವರ್ಕಾಡಿ ರವಿ ಅಲೆವೂರಾಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ತುಳನಾಡ ಬಲಿಯೇಂದ್ರೆ’ ಎಂಬ ಪೌರಾಣಿಕ ಪ್ರಸಂಗದ ಯಕ್ಷಗಾನ ಬಯಲಾಟ