ವಿಜಯಪುರ : ಕುಮಾರವ್ಯಾಸ ಭಾರತ ವೇದಿಕೆ ಇದರ ವತಿಯಿಂದ ಶ್ರಾವಣ ಮಾಸದ ದಂಪತ್ ಪೂಜೆ ಕಾರ್ಯಕ್ರಮದಲ್ಲಿ ಗಮಕ ವಾಚನ ವ್ಯಾಖ್ಯಾನವು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 11-00 ಗಂಟೆಗೆ ವಿಜಯಪುರದ ರಾಘವೇಂದ್ರ ಕಾಲನಿಯಲ್ಲಿರುವ ಕುಮಾರವ್ಯಾಸ ಭಾರತ ಭವನದಲ್ಲಿ ನಡೆಯಲಿದೆ.
ಕುಮಾರ ವಾಲ್ಮೀಕಿ ಕವಿಗಳ ತೊರವೆ ರಾಮಾಯಣದ ‘ಸೀತಾರಾಮ ಕಲ್ಯಾಣ ಪ್ರಸಂಗ’ದ ವಾಚನ ಶ್ರೀಮತಿ ಶಾಂತಾ ಕೌತಾಳ್ ಮತ್ತು ವ್ಯಾಖ್ಯಾನ ಕಲ್ಯಾಣರಾವ್ ದೇಶಪಾಂಡೆ ಇವರುಗಳು ನಡೆಸಿಕೊಡಲಿದ್ದಾರೆ.