ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗಮಕಕಲಾ ಪರಿಷತ್ತು ಹಮ್ಮಿಕೊಂಡಿರುವ ಮನೆ ಮನೆ ಗಮಕ ಕಾರ್ಯಕ್ರಮದಲ್ಲಿ ಮಿಥುನ ಮಾಸದ ಗಮಕ ವಾಚನ- ವ್ಯಾಖ್ಯಾನವು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ 14ಜುಲೈ 2025ರಂದು ರವೀಂದ್ರ ಶೆಟ್ಟಿ ಬಳಂಜ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಕವಿಯು ರಚಿಸಿದ ಗದುಗಿನ ಭಾರತದ ಸಭಾ ಪರ್ವದಲ್ಲಿನ ‘ಶಿಶುಪಾಲ ಮೋಕ್ಷ’ ಎಂಬ ಕಾವ್ಯ ಭಾಗವನ್ನು ಪ್ರಸ್ತುತಪಡಿಸಲಾಯಿತು. ವಾಚನದಲ್ಲಿ ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲುರಾಯ ಗೇರುಕಟ್ಟೆ ಮತ್ತು ವ್ಯಾಖ್ಯಾನದಲ್ಲಿ ಎಸ್. ಡಿ. ಎಮ್. ಕಾಲೇಜ್ ಉಜಿರೆ ಇಲ್ಲಿನ ಪ್ರಾಧ್ಯಾಪಕರಾದ ಡಾ. ದಿವಾ ಕೊಕ್ಕಡ ಪಾಲ್ಗೊಂಡು ಸಹಕರಿಸಿದರು. ಪರಿಷತ್ತಿನ ಅಧ್ಯಕ್ಷರಾದ ರಾಮಕೃಷ್ಣ ಭಟ್ ಉಜಿರೆ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮೇಧಾ ಅಶೋಕ ಭಟ್ ವಂದಿಸಿದರು. ಎಸ್. ಡಿ. ಎಮ್. ವಸತಿ ಪ. ಪೂ. ಕಾಲೇಜಿನ ಪ್ರಾಚಾರ್ಯ ಸುನಿಲ್ ಪಂಡಿತ್, ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಧರ ಭಟ್, ಸುವರ್ಣಕುಮಾರಿ ಕಲ್ಲೂರಾಯ, ಹಿರಿಯರಾದ ಗುರುನಾಥ ಪ್ರಭು, ರಮೇಶ್ ಮಯ್ಯ, ಅಶೋಕ್ ಭಟ್, ಏ. ಡಿ. ಸುರೇಶ್, ಶ್ರೀನಿವಾಸ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.