Subscribe to Updates

    Get the latest creative news from FooBar about art, design and business.

    What's Hot

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026

    ಕರಾವಳಿ ಮಹಿಳೆಯರಿಗಾಗಿ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 07

    June 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಘಾಂದ್ರುಕ್’ ಕಾದಂಬರಿ ಲೋಕಾರ್ಪಣೆ ಹಾಗೂ ಲೇಖಕರ ಜತೆ ಸಂವಾದ
    Book Release

    ‘ಘಾಂದ್ರುಕ್’ ಕಾದಂಬರಿ ಲೋಕಾರ್ಪಣೆ ಹಾಗೂ ಲೇಖಕರ ಜತೆ ಸಂವಾದ

    July 8, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಮಂಗಳೂರಿನ ಸಪ್ನ ಬುಕ್‌ ಹೌಸ್ ಆಶ್ರಯದಲ್ಲಿ ದಿನಾಂಕ : 02-07-2023ರಂದು ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಹಾಗೂ ಲೇಖಕರ ಜತೆ ಸಂವಾದ ಕಾರ್ಯಕ್ರಮವು ಕೆ. ಎಸ್. ರಾವ್ ರಸ್ತೆಯ ಸಪ್ನ ಬುಕ್‌ ಹೌಸ್‌ನಲ್ಲಿ ನಡೆಯಿತು.

    ‘ಘಾಂದ್ರುಕ್’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ “ಲೇಖಕ ಸತೀಶ್ ಚಪ್ಪರಿಕೆ ಅವರು ‘ಘಾಂದ್ರುಕ್’ ಕನ್ನಡ ಕಾದಂಬರಿಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರವಾಸ ಕಥನದಂತಿರುವ ಕೃತಿಯು ಓದುಗನ ಮನಗೆಲ್ಲುತ್ತದೆ. ‘ಘಾಂದ್ರುಕ್’ ಅಂದರೆ ಹಿಮಾಲಯದ ತಪ್ಪಲಿನ ಟಿಬೆಟ್‌ನಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಒಂದು ಹಳ್ಳಿಯ ಹೆಸರು. ಹಳ್ಳಿಯೊಂದರಿಂದ ನಗರಕ್ಕೆ ಬಂದು ಐಟಿ ಕಂಪನಿಯ ಸಿಇಒ ಆಗುವ ಹಂತಕ್ಕೆ ಬೆಳೆದ ಯುವಕನಿಗೆ ಹಣ, ಬೌದ್ಧಿಕ ಸುಖಕ್ಕೆ ಒಂದು ಮಿತಿ ಇದೆ ಅನಿಸುತ್ತದೆ ಮತ್ತು ಇದರ ಆಚೆಗೂ ಒಂದು ಬದುಕಿದೆ ಎಂಬ ಒಳಅರಿವು ಮೂಡುತ್ತದೆ. ನಂತರ ಆತ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಮೊಬೈಲ್ ಸಿಮ್ ತೆಗೆದಿಟ್ಟು ‘ಘಾಂದ್ರುಕ್’ ಹಳ್ಳಿಯತ್ತ ಮುಖಮಾಡುತ್ತಾನೆ. ಈ ಹಿಮನಡಿಗೆಯ ಅದ್ಭುತ ಲೋಕ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ. ಇದು ಅಧ್ಯಾತ್ಮದ ಔನ್ನತ್ಯದ ಕಡೆಗೆ ಚಲಿಸುವ ಗತಿಯೂ ಹೌದು” ಎಂದು ವಿಶ್ಲೇಷಿಸಿದರು.

    ಕೃತಿ ಪರಿಚಯಿಸಿದ ಹಿರಿಯ ಲೇಖಕಿ ಡಾ.ರಾಜಲಕ್ಷ್ಮಿ ಎನ್.ಕೆ. “ಚಲನಶೀಲವಾದ ಕಾಲಘಟ್ಟವನ್ನು ಕಾದಂಬರಿಯಲ್ಲಿ ಹಿಡಿದಿಡಲಾಗಿದೆ. ಪ್ರವಾಸದ ಜತೆಗೆ ಹೊಸ ಹೊಳಪೊಂದನ್ನು ಈ ಕಾದಂಬರಿ ನಮಗೆ ನೀಡುತ್ತದೆ” ಎಂದರು.

    ಬಳಿಕ ಲೇಖಕರ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ಕೇಶವ ಕುಡ್ಲ, ಮೀನಾಕ್ಷಿ ರಾಮಚಂದ್ರ ಹಾಗೂ ಅರುಣಾ ನಾಗರಾಜ್, ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಘಟಕದ ಅಧ್ಯಕ್ಷ ಮಂಜುನಾಥ ರೇವಣಕರ್ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ ಯಡಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಕಾಸ ಹೊಸಮನಿಯವರು ರಾಷ್ಟ್ರಮಟ್ಟದ ವಿಚಾರಗೋಷ್ಠಿಗೆ ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಯ್ಕೆ
    Next Article ಪರಿಚಯ ಲೇಖನ | ‘ಅನುಭವಿ ಸ್ತ್ರೀ ವೇಷಧಾರಿ’ ಕೆ.ಶಂಕರ ದೇವಾಡಿಗ
    roovari

    Add Comment Cancel Reply


    Related Posts

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026

    ಕರಾವಳಿ ಮಹಿಳೆಯರಿಗಾಗಿ ಕಥಾ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 07

    June 10, 2026

    ‘ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ’ಕ್ಕೆ ಕೃತಿ ಆಯ್ಕೆ

    June 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.