ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಗಳೂರು ತಾಲೂಕು ಮತ್ತು ಥಿಯೊಸೊಫಿಕಲ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ ಗುರು ಪೂಣಿ೯ಮಾ (ವ್ಯಾಸ ಜಯಂತಿ) ಕಾಯ೯ಕ್ರಮವು ದಿನಾಂಕ 14 ಜುಲೈ 2025ರಂದು ಮಂಗಳೂರಿನ ಬೆಸೆಂಟ್ ಮಂದಿರ(ಥಿಯೊಸೊಫಿಕಲ್ ಸೊಸೈಟಿ) ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ ವ್ಯಾಸ ಭಾರತ ಗ್ರಂಥಕ್ಕೆ ಆರತಿ ಬೆಳಗಿದ ಅ. ಭಾ. ಸಾ. ಪ. ಮಂಗಳೂರು ತಾಲೂಕು ಉಪಾಧ್ಯಕ್ಷ ಹಾಗೂ ಥಿಯೊಸೊಫಿಕಲ್ ಸೊಸೈಟಿ ಅಧ್ಯಕ್ಷರಾದ ವಿದ್ವಾನ್ ಶ್ರೀ ತುಪ್ಪೇಕಲ್ಲು ನರಸಿಂಹ ಶೆಟ್ಟಿ ಮಾತನಾಡಿ “ಗುರು ಎಂಬ ಶಬ್ದವೇ ಅಂಧಕಾರವನ್ನು ಹೊಡೆದೋಡಿಸಿ, ಸುಜ್ಞಾನದ ಸುಗಂಧವನ್ನು ಎಲ್ಲೆಡೆ ಪಸರಿಸುವುದು ಎಂದಥ೯. ವೇದವ್ಯಾಸರು 4 ವೇದಗಳನ್ನು ವಿಂಗಡಿಸಿ ತಮ್ಮ ಶಿಷ್ಯರ ಕೈಯಲಿಟ್ಟು ಜ್ಞಾನವನ್ನು ಎಲ್ಲರಿಗೂ ಉಣಬಡಿಸಿದ ಮಹಾನ್ ಮುನಿಗಳು”. ಎಂದು ವೇದವ್ಯಾಸರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.
ಅ. ಭಾ. ಸಾ. ಪ ದ. ಕ ಜಿಲ್ಲೆಯ ಅದ್ಯಕ್ಷರಾದ ಶ್ರೀ ಹರೀಶ್ ಪಿ. ಬಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಾನ್ ಶ್ರೀ ಕೇಶವ ಭಟ್ ಅವರು ಮೋಕ್ಷ ಸಂಪಾದನೆಗಾಗಿ ದೇಹ ಮತ್ತು ಮನಸ್ಸನ್ನು ಹೇಗೆ ಶುದ್ಧಿಗೊಳಿಸಿ ಸಜ್ಜಾಗಿಸಬೇಕು ಎಂಬುವುದರ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.
ಮೊದಲಿಗೆ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡ ಕಾಯ೯ಕ್ರಮದಲ್ಲಿ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಶ್ರೀಮತಿ ಯಶೋದಾ ಕುಮಾರಿ ನಿರೂಪಣೆಗೈದು, ಶ್ರೀಮತಿ ಶೈಲಜಾ ಪುದುಕೋಳಿ ವಂದಿಸಿದರು.