ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ, ಮಂಗಳೂರು ಇದರ 30 ಸಂವತ್ಸರಗಳ ಕಿಂಕಿಣಿ ತ್ರಿಂಶತ್ ಸಂಭ್ರಮದ ಈ ಸಂದರ್ಭದಲ್ಲಿ 18ನೇ ವರ್ಷದ ‘ಗುರು ಪೂರ್ಣಿಮ’ ಗುರುನಮನ – ಮಾತಾ ಪಿತರ ಚರಣ ಪೂಜನ ಕಾರ್ಯಕ್ರಮವು ದಿನಾಂಕ 13 ಜುಲೈ 2025ರ ಭಾನುವಾರದಂದು ಬೆಳಿಗ್ಗೆ ಘಂಟೆ 10.00 ಕ್ಕೆ ಸರಿಯಾಗಿ ಸುರತ್ಕಲ್ ಗಣೇಶಪುರದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮೇಂದ್ರ ಗಣೇಶಪುರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೇ. ಮೂ. ಶ್ರೀ ಸದಾನಂದ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ‘ಯೋಗ ಚೇತನಾ’ ಮಂಗಳೂರು ಇದರ ನಿರ್ದೇಶಕಿಯಾದ ಶ್ರೀಮತಿ ಚೇತನಾ ಬಡೇಕರ್ ಉಪನ್ಯಾಸ ನೀಡಲಿದ್ದು, ಸಮಾರಂಭದಲ್ಲಿ ಮಂಗಳೂರಿನ ಬಿಜೈಯ ‘ಸನಾತನ ನಾಟ್ಯಾಲಯ’ ಇಲ್ಲಿನ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರಿಗೆ ‘ಗುರು ನಮನ’ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಭರತಾಂಜಲಿ (ರಿ.) ಕೊಟ್ಟಾರ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಟ್ರಸ್ಟಿಗಳಾದ ಶ್ರೀಮತಿ ಪ್ರತಿಮಾ ಶ್ರೀಧರ್ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

