ಮಂಗಳೂರು : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ನೇತೃತ್ವದಲ್ಲಿ ರಾಮಕೃಷ್ಣ ತಪೋವನ ಪೊಳಲಿ ಸಹಕಾರದೊಂದಿಗೆ ಏಳು ದಿನಗಳ ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತು ತಯಾರಿಕೆಯ ಉಚಿತ ತರಬೇತಿ ಉದ್ಘಾಟನಾ ಕಾರ್ಯಕ್ರಮ ದಿನಾಂಕ 26-07-2023ರಂದು ಪೊಳಲಿ ತಪೋವನದಲ್ಲಿ ನಡೆಯಿತು.
ರಾಮಕೃಷ್ಣ ತಪೋವನದ ಗುರು ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, “ಮಹಿಳೆಯರು ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ಸಂಸಾರ ನಿಭಾಯಿಸಿಕೊಂಡು ಮನೆಯಲ್ಲಿಯೇ ಸ್ವೋದ್ಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು. ಮಹಿಳಾ ಶಕ್ತಿ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಡಿಯಿಡಬೇಕು” ಎಂದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಚಿನ್ ಹೆಗ್ಡೆ ಮಾತನಾಡಿ, ಪ್ರತಿಷ್ಠಾನದ ಕಾರ್ಯಕ್ರಮಗಳ ಬಗ್ಗೆ ಮಹಿಳೆಯರು, ರೈತರು, ಸಮುದಾಯದ ಜನರ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ವಿ.ಮಾಲಿನಿ, ಮಹಿಳಾ ಚಿಂತಕಿ ಮಂಗಳಾ ಭಟ್, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ, ತರಬೇತುದಾರ ದಿನೇಶ್ ಉಪಸ್ಥಿತರಿದ್ದರು. ವನಿತಾ ಸ್ವಾಗತಿಸಿ, ತುಷಾರ ವಂದಿಸಿ, ಗುಣವತಿ ನಿರೂಪಿಸಿದರು.