ಬ್ರಹ್ಮಾವರ : ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದಶಾವತಾರ ಐದು ಮೇಳಗಳ ತಿರುಗಾಟದ ಕೊನೆಯ ಸೇವೆ ಆಟ ಶ್ರೀ ಕ್ಷೇತ್ರದಲ್ಲಿ ದಿನಾಂಕ 29-05-2024ರಂದು ಜರಗಿತು. ಖ್ಯಾತ ಬಣ್ಣದ ವೇಷಧಾರಿ ಪೇತ್ರಿ ಮಾಧವ ನಾಯ್ಕ ಇವರಿಗೆ ಪ್ರತಿಷ್ಠಿತ ‘ಹಾರಾಡಿ ರಾಮ ಗಾಣಿಗ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಟ್ಠಲದಾಸ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ, ಆಶೀರ್ವಚನ ನೀಡಿದರು. ಅನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶೇಡಿಕೊಡ್ಲು ವಿಠಲಶೆಟ್ಟಿ ಯಕ್ಷಗಾನ ವಿಮರ್ಶಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ, ಬಾರಕೂರು ಶ್ರೀ ವೇಣುಗೋಪಾಲಕೃಷ್ಣ, ದೇವಸ್ಥಾನದ ಸೂರ್ಯನಾರಾಯಣ ಗಾಣಿಗ ಮಟಪಾಡಿ, ದೇವಸ್ಥಾನದ ಕಾರ್ಯ ನಿರ್ವಹಣಾಕಾರಿ ಗೋವಿಂದರಾಜು ಎಸ್., ಆನುವಂಶಿಕ ಮೊಕ್ತೇಸರಾದ ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ನಾಲ್ಕು ಮನೆಯವರು, ಅರ್ಚಕರು, ಸಿಬಂದಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿರಂತರ 30 ವರ್ಷ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹಾಸ್ಯ ಕಲಾವಿದ ಅಣ್ಣಪ್ಪ ಕುಲಾಲ ಮತ್ತು ಬಣ್ಣದ ವೇಷಧಾರಿ ಮೊಗೆಬೆಟ್ಟು ಶಂಕರ ಮರಕಾಲ ಅವರಿಗೆ ರೂ.1 ಲಕ್ಷ ಮೊತ್ತದ ಗೌರವ ಧನ ನೀಡಿ ಅಭಿನಂದಿಸಲಾಯಿತು. ಪ್ರದೀಪ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿ, ಉದಯ ಭಾಸ್ಕರ ಶೆಟ್ಟಿ ನಿರೂಪಿಸಿದರು.