ಬೆಳಗಾವಿ : ರಂಗ ಸಂಪದ ಬೆಳಗಾವಿ ಆಯೋಜಿಸುವ ‘ಹಾಸ್ಯ ಸಂಜೆ’ ಗದ್ಯ– ಪದ್ಯ- ವೈವಿಧ್ಯ ಕಾರ್ಯಕ್ರಮವು 01 ಸೆಪ್ಟೆಂಬರ್ 2024ರ ಭಾನುವಾರದಂದು ಸಂಜೆ ಘಂಟೆ 5.30 ರಿಂದ ಬೆಳಗಾವಿಯ ತಿಳಕವಾಡಿಯಲ್ಲಿರುವ ವಿದ್ಯಾಪೀಠದ ಸಮೀಪದ ಐ. ಎಮ್. ಇ. ಆರ್. ಸಭಾಭವನದಲ್ಲಿ ನಡೆಯಲಿದೆ.
ಶ್ರೀ ಶ್ರೀಪತಿ ಮಂಜನಬೈಲು ಇವರ ಸಂಯೋಜನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂಕಣಕಾರ ಹಾಗೂ ಹಾಸ್ಯೋಕ್ತಿ ಪಟುಗಳಾದ ಶ್ರೀ ಎನ್. ರಾಮನಾಥ ಮತ್ತು ಪ್ರಸಿದ್ಧ ವಾಗ್ಮಿ, ಹರಟೆ ಪಟು ಹಾಗೂ ಹಾಸ್ಯ ಮಾತುಗಾರರಾದ ಶ್ರೀ ವೈ. ವಿ. ಗುಂಡುರಾವ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸಬೇಕೆಂದು ರಂಗಸಂಪದ ಇದರ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿ ವಿನಂತಿಸಿದ್ದಾರೆ.

