ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ಆಶ್ರಯದಲ್ಲಿ ಬಡಗು ಯಕ್ಷಗಾನ ಹಿಮ್ಮೇಳ ತರಗತಿಗಳು ಜೂನ್ 4ರಂದು ಆರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಚಂಡೆವಾದಕ ಶಿವಾನಂದ ಕೋಟ ‘ ಕಲಿತ ಸಂಸ್ಥೆಗೆ, ಕಲಿಸಿದ ಗುರುಗಳಿಗೆ ವಿಧೇಯರಾಗಿದ್ದರೆ ಕಲಿತ ಕಲಿಕೆ ಯಶಸ್ಸು ಸಾಧಿಸುತ್ತದೆ. ಗುರುಗಳ ಮುಖೇನ ಕಲಿತ ವಿದ್ಯೆ ರಂಗದಲ್ಲಿ ಕಾಣುತ್ತದೆ, ಮತ್ತು ಶಾಶ್ವತವಾಗಿ ನಿಲ್ಲುತ್ತದೆ ’ ಎಂದು ಹೇಳಿದರು .
ಅತಿಥಿಗಳಲ್ಲಿ ಒಬ್ಬರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡುತ್ತಾ ‘ಯಕ್ಷಗಾನ ಎನ್ನುವ ಶಬ್ದವೇ ರೋಮಾಂಚನ ಹುಟ್ಟಿಸುವಂತಹುದು ಶಬ್ದ. ಅಂತರಾಷ್ಟಿçÃಯ ನೆಲೆಯಲ್ಲಿ ಗಮನಿಸಿದರೆ ಪ್ರಪಂಚದ ಎಲ್ಲಾ ಕಲೆಗಳನ್ನು ಮೀರಿಸಬಲ್ಲ ಆಂತರಿಕ ಶಕ್ತಿಯನ್ನು ಹೊಂದಿರತಕ್ಕAತಹ ಕಲೆ ಯಕ್ಷಗಾನ. ಇಂತಹ ಕಲೆ ಕರಾವಳಿಯ, ಮಲೆನಾಡಿನ ಕೆಲವೇ ಮಂದಿಗೆ ಪರಿಚಯವಾಗಿದ್ದು ಹೊಸಬರಿಗೆ ಇನ್ನೂ ತಲುಪಲಿಲ್ಲವೆನ್ನುವುದು ವಿಷಾದನೀಯ. ಇನ್ನು ಯಕ್ಷಗಾನ ಕಲಿಕೆಗಾಗಿ ಬರುವವರು ಸೊನ್ನೆಯಿಂದ ಬರಬೇಕು. ಅಂತಹವರಿಗೆ ಮಾತ್ರ ಕಲಿಕೆ ಸುಲಭ ಸಾಧ್ಯ. ಇತರ ಕಲಿಕಾ ಕೇಂದ್ರಗಳನ್ನು ಗಮನಿಸಿದರೆ ಒಳ್ಳೆಯ ಗುರುಗಳ ವ್ಯವಸ್ಥೆ ಇದೆ. ಇಂತಹ ಗುರುಗಳಿಂದ ಕಲಿತರೆ ನಿಜಕ್ಕೂ ಅರ್ಥಪೂರ್ಣ ಕಲಾವಿದರಾಗುವುದಕ್ಕೆ ಸಾಧ್ಯ’ ಎಂದು ಅಭಿಪ್ರಾಯ ಪಟ್ಟರು .
ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಗುರುಗಳಾದ ಕೊÊಕೂರು ಸೀತಾರಾಮ ಶೆಟ್ಟಿ, ಕೂಡ್ಲಿ ದೇವದಾಸ ರಾವ್, ಲಂಬೋದರ ಹೆಗಡೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಮಾ| ಕಿಶನ್ ಪ್ರಾರ್ಥನೆಗೈದರು.ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರೂಪಣೆ ಮಾಡಿದರು.
Subscribe to Updates
Get the latest creative news from FooBar about art, design and business.
Previous Articleಕಲಾಗ್ರಾಮದಲ್ಲಿ ಕಲಾವಿಲಾಸಿ ಪ್ರಸ್ತುತಪಡಿಸುವ ‘ಮಾನಸ ಪುತ್ರ’ | ಜೂನ್ 11