ಬೆಂಗಳೂರು : ‘ರೂಪಾಂತರ’ ಕ್ರಿಯಾಶೀಲ ಜೀವಗಳು ತಂಡದ ವತಿಯಿಂದ ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರಿಗೆ ರಂಗ ನಮನ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 19 ಆಗಸ್ಟ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರು ರಚಿಸಿರುವ ರೂಪಾಂತರ ಅಭಿನಯಿಸುವ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ‘ಹೆಜ್ಜೆಗಳು’ ನಾಟಕ ಪ್ರದರ್ಶನಗೊಳ್ಳಲಿದೆ. ದಯಮಾಡಿ ಅಭಿಮಾನಿ ರಂಗಾಸಕ್ತರೆಲ್ಲರೂ ನಾಟಕವನ್ನು ನೋಡುವುದರ ಮೂಲಕ ರಂಗಭೂಮಿಯ ದೀಪ ನಿರಂತರವಾಗಿ ಬೆಳಗುತ್ತಿರಲು ನೀವೆಲ್ಲರೂ ಸಾಕ್ಷಿಯಾಗಬೇಕು ಎಂದು ಅತ್ಯಂತ ಗೌರವದಿಂದ, ಪ್ರೀತಿಯಿಂದ ಸ್ವಾಗತಿಸುತ್ತಿದೆ.