ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಪ್ರಸ್ತುತ ಪಡಿಸುವ ‘ಹೆರಿಟೇಜ್ ಕಿಚನ್ ನಾಟಕೋತ್ಸವ’ವು ದಿನಾಂಕ 30-09-2023ರಿಂದ 02-10-2023ರವರೆಗೆ ಬೆಳಗಾವಿಯ ಟಿಳಕ ಚೌಕ್ ಹತ್ತಿರದ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರ (ಹಳೆಯ ರೀಝ ಟಾಕೀಜ್)ದಲ್ಲಿ ನಡೆಯಲಿದೆ.
ದಿನಾಂಕ 30-09-2023 ಶನಿವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಮರಣ ಮೃದಂಗ’
ತಂದೆ ಹಾಗೂ ಮಗನ ಮಧ್ಯೆ ನಡೆಯುವ ರಾಜಕೀಯ ವಿಡಂಬನಾತ್ಮಕ ಈ ನಾಟಕವನ್ನು ಬೆಳಗಾವಿಯ ರಂಗ ಸಂಪದ ತಂಡದವರು ಪ್ರಸ್ತುತ ಪಡಿಸಲಿದ್ದಾರೆ. ಶ್ರೀ ರಾಜೇಂದ್ರ ಕಾರಂತ ರಚಿಸಿರುವ ಈ ನಾಟಕದ ನಿರ್ದೇಶನವನ್ನು ಡಾ. ಅರವಿಂದ ಕುಲಕರ್ಣಿ ಮಾಡಿದ್ದು, ಸಂಗೀತ ಶ್ರೀ ಶ್ರೀಪತಿ ಮಂಜನಬೈಲು ಹಾಗೂ ಅಂತರಾ ಅವರದ್ದು.
ದಿನಾಂಕ 01-10-2023 ರವಿವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಪ್ರಭಾಸ’
ಮೇಡಂ ಮೇರಿ ಕ್ಯೂರಿ ಜೀವನಾಧಾರಿತ ಈ ವೈಜ್ಞಾನಿಕ ನಾಟಕವನ್ನು ಸಾಲಿಯಾನ್ ಉಮೇಶ್ ನಾರಾಯಣ ಇವರ ನಿರ್ದೇಶನದಲ್ಲಿ ಧಾರವಾಡದ ಅಭಿನಯ ಭಾರತಿ ಪ್ರಸ್ತುತ ಪಡಿಸಲಿದೆ.
ದಿನಾಂಕ 02-10-2023 ಸೋಮವಾರ ಸಂಜೆ ಗಂಟೆ 6.30ಕ್ಕೆ ನಾಟಕ ‘ಸಂಜೆಯ ಹಾಡು’
ಹಿರಿಯ ನಾಗರಿಕರ ಜೀವನಾಧಾರಿತ ಈ ನಾಟಕವನ್ನು ಮೈಸೂರಿನ ಸಂಚಲನ ತಂಡದವರು ಪ್ರಸ್ತುತ ಪಡಿಸಲಿದ್ದು, ಇದರ ನಿರ್ದೇಶನ ಮಧು ಮಳವಳ್ಳಿಯವರದ್ದು. ಓದು – ಉದ್ಯೋಗಗಳಿಗಾಗಿ ಹಳ್ಳಿಗಳಿಂದ ನಗರ ಮತ್ತು ಹೊರ ದೇಶಗಳಿಗೆ ಹೋಗುವ ಮಕ್ಕಳು ತದನಂತರ ತಮ್ಮದೇ ಜಗತ್ತಲ್ಲಿ ಮೈಮರೆತು ಹುಟ್ಟೂರಲ್ಲಿ ಒಂಟಿಯಾಗಿ ಬದುಕುವ ತಂದೆ ತಾಯಿಯನ್ನು ಹೇಗೆ ಕಡೆಗಣಿಸುತ್ತಾರೆ ಎಂಬುದು ವಿಷಾದದ ಸಂಗತಿ. ಮಕ್ಕಳೊಂದಿಗೂ ಹೋಗಲಾಗದೇ, ಹುಟ್ಟೂರಿನ ವ್ಯಾಮೋಹವನ್ನೂ ಬಿಡಲಾಗದೆ ಪೋಷಕರ ವೃದ್ಯಾಪ್ಯದ ನೋವಿನ ಹಾಡೇ…. ಸಂಜೆಯ ಹಾಡು.