ಬೈಂದೂರು : ಲಾವಣ್ಯ (ರಿ.) ಬೈಂದೂರು ಇವರ ಆಶ್ರಯದಲ್ಲಿ ಕುಂದಾಪುರದ ಪ್ರಥಮದರ್ಜೆ ಗುತ್ತಿಗೆದಾರರಾದ ಶ್ರೀ ರಾಮಕೃಷ್ಣ ಶೇರುಗಾರ್ ಬಿಜೂರು, ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಹಾಗೂ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ಸತೀಶ್ ಬಟವಾಡಿ ಇವರ ಸಹಯೋಗದೊಂದಿಗೆ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ‘ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರ’ದಲ್ಲಿ ರೂಪುಗೊಂಡ ನಾಟಕಗಳ ಪ್ರದರ್ಶನವು ದಿನಾಂಕ 10 ಮೇ 2025ರ ಶನಿವಾರದಂದು ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಲಿದೆ.
ಅಂದು ಕೇಶ್ ಎಲ್ಲಂಗಳ ರಚನೆ ಹಾಗೂ ರಾಜೇಶ್ ನಾಯ್ಕ ನಿರ್ದೇಶನದ ‘ಅಜ್ಜಿಕಥೆ’ ಮತ್ತು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚನೆ ಹಾಗೂ ಬಿ. ಗಣೇಶ್ ಕಾರಂತ್, ರೋಶನ್ ಕುಮಾರ್ ನಿರ್ದೇಶನದ ‘ಹಿಮಮಣಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ನಾಟಕಗಳಿಗೆ ಚಂದ್ರ ಬಂಕೇಶ್ವರ ಮತ್ತು ಮೂರ್ತಿ ಬೈಂದೂರು ಸಂಗೀತ ನೀಡಿದ್ದು, ಪ್ರಸಾಧನ ಹಾಗೂ ರಂಗ ಸಜ್ಜಿಕೆಯಲ್ಲಿ ತ್ರಿವಿಕ್ರಮ್ ರಾವ್ ಉಪ್ಪುಂದ, ಎಚ್. ಉದಯ್ ಆಚಾರ್ಯ, ನಾಗರಾಜ ಯಡ್ತರೆ, ಸುರೇಶ ಹುದಾರ್ ನಿರ್ವಹಿಸಲಿದ್ದಾರೆ. ನಾಟಕದ ಬೆಳಕಿನ ಸಂಯೋಜನೆ ಬಿ.ರಾಮ ಟೈಲರ್, ಬಿ. ನಾಗರಾಜ ಕಾರಂತ್ ಹಾಗೂ ಸುಮಂತ್ ಆಚಾರ್ಯ ಇವರದ್ದು.

