ಮುಂಬೈ : ಸುರ್ ಬಹಾರ್ ಸಂಗೀತ್ ಸಭಾ ಪ್ರಸ್ತುತ ಪಡಿಸುವ ಮುಂಬೈ ಸಂಗೀತ ಕಛೇರಿಯು ದಿನಾಂಕ 14 ಜೂನ್ 2025ರಂದು ಸಂಜೆ 5-30 ಗಂಟೆಗೆ ಮುಂಬೈಯ ಮುಲುಂದ್ ವೆಸ್ಟ್ ನಲ್ಲಿ ನಡೆಯಲಿದೆ.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಪುಣೆಯ ವಿದುಷಿ ಪೌರ್ಣಿಮ ಧೂಮಲೆ ಇವರ ಹಾಡುಗಾರಿಕೆಗೆ ಪ್ರವೀಣ್ ಕರ್ಕರೆ ತಬಲಾದಲ್ಲಿ ಹಾಗೂ ಸುಧಾಂಶು ಘರ್ಪುರೆ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.