ಕಾಸರಗೋಡು : ಕರಂದಕ್ಕಾಡು ಪದ್ಮಗಿರಿಯಲ್ಲಿರುವ ರಂಗ ಚಿನ್ನಾರಿ ಕಾಸರಗೋಡು (ರಿ.) ಇದರ ಘಟಕಗಳಾದ ನಾರಿ ಚಿನ್ನಾರಿ (ಮಹಿಳಾ ಘಟಕ) ಸ್ವರ ಚಿನ್ನಾರಿ (ಸಂಗೀತ ಘಟಕ) ನೇತೃತ್ವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಇವರಿಗೆ ಹುಟ್ಟೂರ ಗೌರವ ಕಾರ್ಯಕ್ರಮವು ದಿನಾಂಕ 01-12-2023ರಂದು ಸಂಜೆ ಗಂಟೆ 5ಕ್ಕೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕಾಸರಗೋಡಿನ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಶ್ರೀಮತಿ ಉಮಾಶ್ರೀ, ರಾಷ್ಟ್ರ ಪ್ರಶಸ್ತಿ ವಿಜೇತ ನಿದೇಶಕ ಶ್ರೀ ಶಿವಧ್ವಜ್ ಶೆಟ್ಟಿ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ ರವೀಂದ್ರ ಜೋಶಿ ಇವರುಗಳು ಭಾಗವಹಿಸಲಿದ್ದಾರೆ.
2021ರ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ (ತೀರ್ಪುಗಾರರ ವಿಶೇಷ ಉಲ್ಲೇಖ) ಪ್ರಶಸ್ತಿಗೆ ಶ್ರೀ ಸುಬ್ರಹ್ಮಣ್ಯ ಬಾಡೂರು ಭಾಜನರಾಗಿದ್ದಾರೆ. ಚಲನಚಿತ್ರ ಪತ್ರಕರ್ತರೊಬ್ಬರು ಕರ್ನಾಟಕದಲ್ಲಿ ಈ ರಾಷ್ಟ್ರೀಯ ಗೌರವ ಪಡೆದಿದ್ದು ಇದೇ ಮೊದಲು. ಈ ಪ್ರಶಸ್ತಿಯನ್ನು ಪಡೆದ ಇವರು ಕಾಸರಗೋಡಿನವರು ಎನ್ನುವುದು ನಮಗೆ ಹೆಮ್ಮೆ. ಕಾಸರಗೋಡಿನ ರಂಗ ಚಿನ್ನಾರಿ ಸಂಸ್ಥೆಯು ಕನ್ನಡಪರ ಸಂಘಟನೆಗಳಾದ ಕರ್ನಾಟಕ ಸಮಿತಿ ಕಾಸರಗೋಡು, ಕನ್ನಡ ಸಾಹಿತ್ಯ ಪರಿಷತ್ತು (ಕೇರಳ ಘಟಕ), ಕೂಡ್ಲು ಯುವಜನ ಸಂಘ (ರಿ), ಕನ್ನಡ ಭವನ ಮತ್ತು ಗ್ರಂಥಾಲಯ (ರಿ), ಯವನಿಕಾ ಕಾಸರಗೋಡು (ರಿ), ಗಮಕ ಕಲಾ ಪರಿಷತ್ತು, ತರುಣ ಕಲಾ ವೃಂದ ಉಪ್ಪಳ (ರಿ), ಗೀತಾ ವಿಹಾರ ಕಾಸರಗೋಡು (ರಿ), ಗಡಿನಾಡ ಕಲಾವಿದರು (ರಿ), ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ), ನೃತ್ಯ ನಿಕೇತನ (ರಿ), ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಆರ್ಯ ಕಾತ್ಯಾಯಿನಿ ಕಲಾ ಸಂಘ (ರಿ), ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು (ರಿ), ಶ್ರೀ ದುರ್ಗಾ ಯುವಕ ಸಂಘ ಬಾಡೂರು (ರಿ), ತುಳು ಕೂಟ ಕಾಸರಗೋಡು (ರಿ), ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ, ಮೇಘ ರಂಜನಾ ಚಂದ್ರಗಿರಿ (ರಿ), ವಿಕಾಸ ಮೀಯಪದವು (ರಿ), ನೆಲ್ಲಿಕುಂಜೆ ಫ್ರೆಂಡ್ಸ್ ಸರ್ಕಲ್, ಮಾಸ್ಟರ್ ಪ್ಯೂಶನ್, ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ), ಸ್ವರ ಚಿನ್ನಾರಿ ಮತ್ತು ನಾರಿ ಚಿನ್ನಾರಿ ಜೊತೆ ಸೇರಿ ಪ್ರಚಾರದ ಬೆನ್ನು ಬೀಳದೆ, ಪ್ರಾಮಾಣಿಕವಾಗಿ ಕಳೆದ ನಾಲ್ಕು ದಶಕಗಳಿಂದ ವೃತ್ತಿಪರರಾಗಿರುವ ಇವರನ್ನು ಅಭಿನಂದಿಸುವ ಸಮಾರಂಭವನ್ನು ಆಯೋಜಿಸಿದೆ.