Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಸಿನ್ಸ್-1999 ಶ್ವೇತಯಾನ’ ಉದ್ಘಾಟನೆ  
    Kannada

    ‘ಸಿನ್ಸ್-1999 ಶ್ವೇತಯಾನ’ ಉದ್ಘಾಟನೆ  

    February 26, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ತೆಕ್ಕಟ್ಟೆ: ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್-1999 ಶ್ವೇತಯಾನ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18-02-2024 ರಂದು ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಮಾತನಾಡಿ “ಕಲಾಭಿಮಾನಿಗಳ ಆಸಕ್ತಿಯನ್ನು ಗುರುತಿಸಿ, ಯಶಸ್ವಿ ಸಂಸ್ಥೆ ಪ್ರದರ್ಶನಗಳನ್ನು ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಬೆನ್ನೆಲುಬಾಗಿದ್ದ ಸದಸ್ಯರನ್ನು ರಜತ ಸಂಭ್ರಮದಲ್ಲಿ ನೆನಪಿಸುವ ಕೆಲಸ ಮಾಡುತ್ತಿರುವ ಕಲಾವೃಂದ ಬಹಳಷ್ಟು ಎತ್ತರಕ್ಕೆ ಏರುವ ಸಾಧ್ಯತೆಗಳಿವೆ. ಕಲಾ ಪೋಷಕರಿಗೆ ವೇದಿಕೆ ನಿರ್ಮಿಸಿ, ಅವರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಕಾರ್ಯ ಸಾಧರಣವಲ್ಲ. ಬಹು ಕ್ಲಿಷ್ಟವಾದ ಸಾಹಸವೆನ್ನಿಸುವ ಕೆಲಸವನ್ನೇ ಕೈಗೆತ್ತಿಕೊಂಡು ಮುನ್ನುಗ್ಗುತ್ತಿರುವ ಸಂಸ್ಥೆ ಇಂದು ಇಪ್ಪತೈದನೇ ಸಂಭ್ರಮಕ್ಕೆ ನಾಂದಿ ಹಾಡುತ್ತಿದೆ. 108 ಕಾರ್ಯಕ್ರಮದ ಯೋಜನೆ ಸಾವಿರದಷ್ಟು ಆಗಲಿ” ಎಂದು ಶುಭಹಾರೈಸಿದರು.
    ಶುಭಾಶಂಸನೆಗಾಗಿ ಆಗಮಿಸಿದ ಯಕ್ಷ ಸಾಹಿತಿ ಪವನ್ ಕಿರಣ್‌ಕೆರೆ ಮಾತನ್ನಾಡಿ “ಯಶಸ್ವಿ ಸಂಸ್ಥೆ ಯಕ್ಷಗಾನವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿತ್ತೇ ಹೊರತು ಯಕ್ಷಗಾನದಿಂದ ತಾನು ಮುಖ್ಯ ವಾಹಿನಿಗೆ ಬರುವ ಯಾವ ಪ್ರಯತ್ನವನ್ನು ಮಾಡಿರಲಿಲ್ಲ. ಇಪ್ಪತ್ತೆತೈದು ವರ್ಷದ ಈ ಯಾನ ಪರಿಶುದ್ಧ ಶ್ವೇತಯಾನ. ಎಲ್ಲಾ ತರಗತಿಗಳನ್ನು ನೆರವೇರಿಸುತ್ತಾ, ಅದರಲ್ಲಿ ಅಭಿರುಚಿ ಹುಟ್ಟಿಸುತ್ತಾ ಯಕ್ಷಗಾನದ ಜೊತೆಗೆ ಉಳಿದ ಕಲೆಗಳನ್ನು ಬೆಳೆಸುತ್ತಾ ಬೆಳೆಸುತ್ತಾ  ಕಲೆಯನ್ನು ಕೈ ದಾಟಿಸುವಲ್ಲಿ ಸರ್ವ ಪ್ರಯತ್ನ ಮಾಡುತ್ತಿರುವ ಏಕೈಕ ಸಂಸ್ಥೆ ಯಶಸ್ವಿ ಕಲಾವೃಂದ. ಕಲೆಯು ಚಿರಂಜೀವಿಯಾಗಿ ಉಳಿಯಬೇಕು, ಅಂತಾದರೆ ಮುಂದಿನ ತಲೆಮಾರಿಗೆ ಕಲೆಯನ್ನು ಕಲಿಸಿ ಹಸ್ತಾಂತರಿಸಬೇಕು, ಕೈ ದಾಟಿಸಬೇಕು. ಈ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದ 1999ರಿಂದ ಇಲ್ಲಿಯವರೆಗೆ ಕಲೆಯನ್ನು ಕೈ ದಾಟಿಸುತ್ತಾ ಬಂದಿದೆ. ಅದರ ಪರಿಣಾಮ ಕಲೆಯ ಎಲ್ಲಾ ವಿಭಾಗದ ಕಲಾ ತಂಡವೇ ಪ್ರತೀ ವರ್ಷ ರಂಗವೇರುತ್ತಾ ಕಲೆಯನ್ನು ಮೆರೆಸುತ್ತಿದೆ. ಇಂತಹ ಕಾರ್ಯವನ್ನು ಸ್ತುತಿಸಿದರೆ ಅತಿಶಯೋಕ್ತಿ ಆಗಲಾರದು” ಎಂದರು.
    ಗೌರವ ಉಪಸ್ಥಿತಿಯಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮುರಳಿ ಕಡೆಕಾರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅರುಣ್‌ಕುಮಾರ್ ಶೆಟ್ಟಿ, ಯೋಗೀಂದ್ರ, ಕೃಷ್ಣಮೂರ್ತಿ ಮಂಜರು, ಪ್ರಾಚಾರ್ಯ ಕೆ.ಪಿ. ಹೆಗ್ಡೆ, ಕೊರ್ಗಿ ವಿಠ್ಠಲ ಶೆಟ್ಟಿ, ಸೀತಾರಾಮ ಶೆಟ್ಟಿ ಮಲ್ಯಾಡಿ, ಗೋಪಾಲ ಪೂಜಾರಿ, ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ತುಂಗ ಸ್ವಾಗತಿಸಿ, ಸೀತಾರಾಮ ಶೆಟ್ಟಿ  ಕೊಯಿಕೂರು, ಪ್ರಾಸ್ತಾವಿಕ ಮಾತನ್ನಾಡಿ, ಸುಜಯೀಂದ್ರ ಹಂದೆ ನಿರೂಪಿಸಿ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಧನ್ಯವಾದಗೈದರು. ಬಳಿಕ ಕಲಾ ಪೋಷಕರ ಕಲಾವಂತಿಕೆಯಲ್ಲಿ ಯಕ್ಷಗಾನ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleನಾಟಕ ವಿಮರ್ಶೆ – ಲೀಕ್ ಔಟ್….!
    Next Article ಪುತ್ತೂರಿನ ಅನುರಾಗ ವಠಾರದಲ್ಲಿ ‘ನೆನಪಾಗಿ ಉಳಿದವರು’ ಕೃತಿ ಲೋಕರ್ಪಣೆ
    roovari

    Add Comment Cancel Reply


    Related Posts

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಮಂಗಳೂರಿನಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯಲ್ಲಿ ಯಕ್ಷಗಾನ ಪ್ರದರ್ಶನ | ಜೂನ್ 06

    June 6, 2026

    ತೆಕ್ಕಟ್ಟೆ ಹಯಗ್ರೀವದ ಯಶಸ್ವಿ ಯಕ್ಷಗಾನ ಕೇಂದ್ರದಲ್ಲಿ ಹಿಮ್ಮೇಳ ಮುಮ್ಮೇಳ ತರಗತಿ | ಜೂನ್ 06

    June 5, 2026

    ‘ಸರಯೂ ಅಷ್ಠಾಹ’ದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಪ್ರದರ್ಶನ

    June 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.