Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮಗಳು’ | ಅಕ್ಟೋಬರ್ 25

    October 24, 2026

    ಬಂಗಾರಪ್ಪ ಪ್ರತಿಷ್ಠಾನದ ‘ಬಂಗಾರ ಪ್ರಶಸ್ತಿ’ ಪ್ರಕಟ

    October 24, 2026

    ‘ಡುಂಡಿರಾಜರ ದಂಡಯಾತ್ರೆ’ ಕೃತಿ ಪರಿಚಯ, ಸಂವಾದ ಕಾರ್ಯಕ್ರಮ | ಅಕ್ಟೋಬರ್ 25

    October 24, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಎಸ್‌.ಡಿ.ಎಂ. ಕಾಲೇಜಿನಲ್ಲಿ 35ನೇ ವರ್ಷದ ‘ಯಕ್ಷೋತ್ಸವ’ ಉದ್ಘಾಟನೆ
    Competition

    ಎಸ್‌.ಡಿ.ಎಂ. ಕಾಲೇಜಿನಲ್ಲಿ 35ನೇ ವರ್ಷದ ‘ಯಕ್ಷೋತ್ಸವ’ ಉದ್ಘಾಟನೆ

    October 24, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 35ನೇ ವರ್ಷದ ‘ಯಕ್ಷೋತ್ಸವ’ ಯಕ್ಷಗಾನ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 23 ಅಕ್ಟೋಬರ್ 2026ರಂದು ಉದ್ಘಾಟನೆಗೊಂಡಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ “ಯಕ್ಷಗಾನವೆಂದರೆ ಕೇವಲ ಒಂದು ಕಲಾಪ್ರಕಾರವಲ್ಲ, ಅದು ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈಭವ. ಮಕ್ಕಳಲ್ಲಿ ಈ ಕಲಾಸಕ್ತಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳು ದುಶ್ಚಟಗಳಿಗೆ ಬಲಿ ಬೀಳುತ್ತಿರುವ ಈ ಕಾಲ ಘಟ್ಟದಲ್ಲಿ ಯಕ್ಷಗಾನದಂತಹ ಕಲೆಗಳ ಕಡೆಗೆ ಅವರನ್ನು ಆಸಕ್ತರನ್ನಾಗಿಸಬೇಕು. ಈ ನಿಟ್ಟಿನಲ್ಲಿ ಎಸ್‌.ಡಿ.ಎಂ. ಕಾಲೇಜು ಕಳೆದ 35 ವರ್ಷಗಳಿಂದ ಯಕ್ಷೋತ್ಸವ ಆಯೋಜಿಸುತ್ತಿರುವುದು ಸ್ತುತ್ಯರ್ಹ” ಎಂದು ನುಡಿದರು.

    ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ ಅಧ್ಯಕ್ಷತೆ ವಹಿಸಿದ್ದು, “ಯಕ್ಷಗಾನ ವಕೀಲ ವೃತ್ತಿ ಸೇರಿದಂತೆ ಬದುಕಿಗೆ ಬಹಳಷ್ಟು ಜ್ಞಾನವನ್ನು ಒದಗಿಸುತ್ತದೆ” ಎಂದರು. ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅತಿಥಿಯಾಗಿದ್ದರು. ಯಕ್ಷಗಾನ ವಿದ್ವಾಂಸ, ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು 2025-26 ರಲ್ಲಿ ಅಗಲಿ ಹೋದ ತೆಂಕುತಿಟ್ಟು ಯಕ್ಷಗಾನ ರಂಗದ ಸುಮಾರು 22 ಮಂದಿ ಕಲಾವಿದರನ್ನು ಸ್ಮರಿಸಿ ಸಂಸ್ಮರಣಾ ಭಾಷಣ ಮಾಡಿದರು. ಅಲ್ಲದೆ 35 ವರ್ಷಗಳ ಹಿಂದೆ ಕಾಲೇಜಿನಲ್ಲಿ ಯಕ್ಷೋತ್ಸವ ಪ್ರಾರಂಭವಾಗುವಾಗ ಅದರ ನಿರ್ದೇಶಕರಾಗಿದ್ದು, ಇತ್ತೀಚೆಗೆ ನಮ್ಮನ್ನಗಲಿದ ಪೂರ್ವ ಪ್ರಾಂಶುಪಾಲ ಪ್ರೊ. ಯನ್.ಜೆ. ಕಡಂಬ ಇವರ ನಿಧನಕ್ಕೂ ಶ್ರದ್ದಾಂಜಲಿ ಸಲ್ಲಿಸಿದರು.

    ಪುತ್ತೂರಿನ ವಕೀಲ ಮಹೇಶ್ ಕಜೆ ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಗೋಣಿಬೀಡು, ಸಾಂಸ್ಕೃತಿಕ ಕಾರ್ಯದರ್ಶಿ ವಿಜೇತ್ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷೋತ್ಸವ ಸಂಚಾಲಕ ಪುಷ್ಪರಾಜ್ ಕೆ. ಸ್ವಾಗತಿಸಿ, ವಿದ್ಯಾರ್ಥಿ ಸಂಚಾಲಕಿ ಶ್ರೇಯಾ ವಂದಿಸಿ, ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಯಕ್ಷೋತ್ಸವದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಒಂಭತ್ತು ತಂಡಗಳು ಪಾಲ್ಗೊಂಡಿದ್ದು, ಶನಿವಾರ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

    baikady competition dance Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಅಂಚೆ ಇಲಾಖೆಯಿಂದ ಪತ್ರಲೇಖನ ಸ್ಪರ್ಧೆ | ಕೊನೆಯ ದಿನಾಂಕ ಅಕ್ಟೋಬರ್ 31
    Next Article ‘ಡುಂಡಿರಾಜರ ದಂಡಯಾತ್ರೆ’ ಕೃತಿ ಪರಿಚಯ, ಸಂವಾದ ಕಾರ್ಯಕ್ರಮ | ಅಕ್ಟೋಬರ್ 25
    roovari

    Add Comment Cancel Reply


    Related Posts

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮಗಳು’ | ಅಕ್ಟೋಬರ್ 25

    October 24, 2026

    ಬಂಗಾರಪ್ಪ ಪ್ರತಿಷ್ಠಾನದ ‘ಬಂಗಾರ ಪ್ರಶಸ್ತಿ’ ಪ್ರಕಟ

    October 24, 2026

    ‘ಡುಂಡಿರಾಜರ ದಂಡಯಾತ್ರೆ’ ಕೃತಿ ಪರಿಚಯ, ಸಂವಾದ ಕಾರ್ಯಕ್ರಮ | ಅಕ್ಟೋಬರ್ 25

    October 24, 2026

    ಅಂಚೆ ಇಲಾಖೆಯಿಂದ ಪತ್ರಲೇಖನ ಸ್ಪರ್ಧೆ | ಕೊನೆಯ ದಿನಾಂಕ ಅಕ್ಟೋಬರ್ 31

    October 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.