23 ಮಾರ್ಚ್ 2023, ಉಡುಪಿ: ಹಾವಂಜೆಯ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಈ ಸುಸಂದರ್ಭದಲ್ಲಿ ದೇಶೀಯ ಜನಪದ ಮತ್ತು ಬುಡಕಟ್ಟು ಕಲೆಯ ಪ್ರಚಾರ ಮತ್ತು ಪ್ರೋತ್ಸಾಹಕ್ಕಾಗಿ ಕಲಿಕಾ ಕಾರ್ಯಾಗಾರಗಳನ್ನು ಉಡುಪಿಯ ಬಡಗುಪೇಟೆಯಲ್ಲಿ ಆಯೋಜಿಸಲಾಗುತ್ತಿದೆ. ಭಾರತದಾದಂತ್ಯ ಹರಡಿಕೊಂಡಿರುವ ನಾನಾ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವ ನಿಟ್ಟಿನಲ್ಲಿ ಭಾವನಾ ಫೌಂಡೇಷನ್, ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ “ಪಟಚಿತ್ರ” ದಿನಾಂಕ 31 ಮಾರ್ಚ್ 2023 ರಿಂದ 2 ನೇ ಏಪ್ರಿಲ್ 2023ರವರೆಗೆ ನಡೆಯಲಿದೆ.
ಪಟಚಿತ್ರವು ಒರಿಸ್ಸಾ, ಪಶ್ಚಿಮ ಬಂಗಾಲ ಹಾಗೂ ಬಾಂಗ್ಲಾದೇಶದ ಕಾಲ ಭಾಗಗಳಲ್ಲಿ ಬಳಕೆಯಲ್ಲಿರುವ ಭಾರತಿಯ ವಿಶಿಷ್ಟ ಸಾಂಪ್ರದಾಯಿಕ ಕಲೆಯಾಗಿದೆ. ಈ ಕಲಾಪ್ರಕಾರದಲ್ಲಿ ಅಭಿವ್ಯಕ್ತಗೊಳ್ಳುವ ಪೌರಾಣಿಕ ನಿರೂಪಣೆಗಳು ಹಾಗೂ ಜಾನಪದೀಯ ಕಥೆಗಳ ಚಿತ್ರಗಳು ಅಂತರಾಷ್ಟ್ರೀಯ ಮುನ್ನಣೆ ಗಳಿಸಿದೆ. ಸಾಮಾನ್ಯವಾಗಿ ರೇಷ್ಮೆ ಮತ್ತು ಹತ್ತಿಯ ಬಟ್ಟೆ ಹಾಗೂ ಮತ್ತು ಕಾಗದಗಳ ಮೇಲೆ ಚಿತ್ರಿಸಲಾಗುವ ಈ ಕಲಾಪ್ರಕಾರವನ್ನು ತಾಳೆಯೋಲೆಯ ಮೇಲೆಯೂ ಗೀರಿ ಮತ್ತು ಕೆತ್ತುವ ಕ್ರಮದಲ್ಲಿ ಕೂಡ ರಚಿಸಲಾಗುತ್ತದೆ. ಇದೊಂದು ಸಾಕಷ್ಟು ವಿವರಣಾತ್ಮಕವಾದ ಸಂಕೀಣ೯ತೆಯಿಂದ ಕೂಡಿದ ಕಲಾಪ್ರಕಾರವಾಗಿದ್ದು, ಸಂಗೀತ ಪ್ರದರ್ಶನಗಳ ಸಂದರ್ಭದಲ್ಲಿ ದೃಶ್ಯ ಮಾಧ್ಯಮದ ಸಾಧನವಾಗಿ ಹಾಗೂ ಹಲವು ಆಚರಣೆಗಳ ಸಂದರ್ಭಗಳಲ್ಲಿಯೂ ಬಳಸಲ್ಪಡುತ್ತದೆ.
1987ರಲ್ಲಿ ಪುರಿಯ ಬಳಿಯ ದಂಡಸಾಹಿಯಲ್ಲಿ ಜನಿಸಿರುವ ಕಲಾವಿದೆ ಗೀತಾಂಜಲಿ ದಾಸ್ ರವರು ಖ್ಯಾತ ಪಟಚಿತ್ರ ಕಲಾವಿದ ಪ್ರಣಬ್ ನಾರಾಯಣ್ ದಾಸ್‌ರವರ ಪತ್ನಿ, ಪಟಚಿತ್ರ ಕಲಾಪ್ರಕಾರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು 1985ರಲ್ಲಿ ಪಡೆದ ಗುರು ದಿ. ಅರ್ಜುನ್ ಮಹಾರಾಜಾ ಅವರಿಂದ ತಮ್ಮಹತ್ತನೆಯ ವಯಸ್ಸಿನಲ್ಲಿಯೇ ಪಟಚಿತ್ರ ಮತ್ತು ತಾಳೆಯೋಲೆ ಚಿತ್ರಗಳನ್ನು ಅಭ್ಯಸಿಸುತ್ತ ಓರ್ವ ಉತ್ತಮ ಶಿಷ್ಯಯೆಂಬುದಾಗಿ ಪ್ರಶಂಸೆಯನ್ನಿವರು ಗಳಿಸಿದವರು. ಇವರೋರ್ವ ಉತ್ತಮ ಕುಶಲಕರ್ಮಿ ಮತ್ತು ಪಟಚಿತ್ರ ಪರಂಪರೆಯನ್ನು ಜೀವಂತವಾಗಿಡಲು ತೀವ್ರ ಆಸಕ್ತಿಯನ್ನು ಹೊಂದಿದವರಾಗಿರುವರು.
ಪಟಚಿತ್ರ 31ನೇ ಮಾರ್ಚ್ ಮತ್ತು 01ನೇ ಏಪ್ರಿಲ್ 2023 ನೋಂದಣಿ ಶುಲ್ಕ ರೂ.1,700/-
ತಾಳೆ ಪಟಚಿತ್ರ (ತಾಳೆಯೋಲೆ) 02ನೇ ಏಪ್ರಿಲ್ 2023 ನೋಂದಣಿ ಶುಲ್ಕ ರೂ.1,200/-
ಬನ್ನಿ…. ದೇಶೀಯ ಕಲಾಪ್ರಕಾರಗಳನ್ನು ಕಲಿಯೋಣ, ಆಸ್ವಾದಿಸೋಣ ಹಾಗೂ ಪೋಷಿಸೋಣ.