ಈಶ್ವರಮಂಗಲ : ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ‘ಇಂದ್ರಜಿತು’ ಯಕ್ಷಗಾನ ತಾಳಮದ್ದಳೆ ದಿನಾಂಕ 01 -ಮಾರ್ಚ್ -2025ರಂದು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಪ್ರಯುಕ್ತ ದೇವಾಲಯದ ಸಭಾಭವನದಲ್ಲಿ ಜರಗಿತು.
ಯಕ್ಷಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯೊಂದಿಗೆ ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯ ಕೃತಿಯನ್ನೊಳಗೊಂಡ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್ ಹಾಗೂ ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ ಅವರು ಹಾಡಿ ರಂಜಿಸಿದರು.
ಚೆಂಡೆ, ಮದ್ದಳೆ ವಾದನದಲ್ಲಿ ವಿಷ್ಣು ಶರಣ ಬನಾರಿ, ಶ್ರೀಧರ ಆಚಾರ್ಯ ಈಶ್ವರ ಮಂಗಲ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಮತ್ತು ಚಕ್ರತಾಳದಲ್ಲಿ ಮಾಷ್ಟರ್ ಶ್ರೀದೇವ್ ಆಚಾರ್ಯ ಸಹಕರಿಸಿದರು.
ಅರ್ಥಧಾರಿಗಳಾಗಿ ಶ್ರೀಮತಿಯರಾದ ಸರಿತಾ ರಮಾನಂದ ರೈ ದೇಲಂಪಾಡಿ, ಶೀಲಾ ಹೇಮನಾಥ ಕೇದೆಗಡಿ, ಪವಿತ್ರಾ ದಿವಾಕರ ಗೌಡ ಮುದಿಯಾರು, ಪ್ರೇಮಾ ಮನೋಹರ ಬಂದ್ಯಡ್ಕ, ಜಲಜಾಕ್ಷಿ, ಸತೀಶ್ ರೈ ಬೆಳ್ಳಿಪ್ಪಾಡಿ, ಸುಮಲತಾ ಉದಯಕುಮಾರ್ ದೇಲಂಪಾಡಿ, ಸುಜಾತ ಮೋಹನದಾಸ ರೈ ದೇಲಂಪಾಡಿ, ಶಾಂತಾಕುಮಾರಿ ದೇಲಂಪಾಡಿ ಹಾಗೂ ಕುಸುಮಾ ಜಯಪ್ರಕಾಶ್ ಕುತ್ತಿಮುಂಡ ಈ ಪ್ರತಿಭಾನ್ವಿತ ಮಹಿಳಾ ಮಾತೆಯರು ಪ್ರಸ್ತುತ ಪಡಿಸಿದ ಅರ್ಥಗಾರಿಕೆ ಜನಮೆಚ್ಚುಗೆ ಗಳಿಸಿತು.
ದೇವಾಲಯದ ಆಡಳಿತ ಮಂಡಳಿಯವರು ಸ್ವಾಗತಿಸಿ, ಕಾರ್ಯಕ್ರಮದ ಪ್ರಾಯೋಜಕರಾದ ರಾಮನಾಯ್ಕ ದೇಲಂಪಾಡಿಯವರು ಧನ್ಯವಾದ ಸಮರ್ಪಿಸಿದರು.
Subscribe to Updates
Get the latest creative news from FooBar about art, design and business.
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ‘ಇಂದ್ರಜಿತು’ ಯಕ್ಷಗಾನ ತಾಳಮದ್ದಳೆ
No Comments1 Min Read