Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷ ರಂಗದ ಯುವ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ
    Article

    ಯಕ್ಷ ರಂಗದ ಯುವ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ

    January 31, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಮಹಿಳಾ ಕಲಾವಿದೆಯರು ಕಾಣಲು ಸಿಗುತ್ತಾರೆ. ಇಂತಹ ಅನೇಕ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಹವ್ಯಾಸಿ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ.

    ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿಯ ಶ್ರೀಮತಿ ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ಮರಕಾಲ ಇವರ ಮಗಳಾಗಿ ೩೧.೦೧.೧೯೯೮ ರಂದು ಇವರ ಜನನ. ತಮ್ಮ 9ನೇ ವಯಸ್ಸಿಗೆ ಯಕ್ಷಗಾನದತ್ತ ಒಲವು ಮೊದಲ ವೇಷ ಇವರು ಯಕ್ಷಬಾಲಭಾರತದಲ್ಲಿ ಕೌರವನ ವೇಷ ಮಾಡಿ ಎಲ್ಲರ ಮೆಚ್ಚುಗೆ ಪಾತ್ರರಾದರು. ಇದು ಇವರ ಯಕ್ಷಗಾನದತ್ತ ಒಲವು ತುಂಬಾನೇ ಹೆಚ್ಚಿಸಿತ್ತು.
    ಮೊದಲಿನಿಂದಲೂ ಯಕ್ಷಗಾನದ ಮೇಲೆ ಒಲವು ಇತ್ತು. ಅಪ್ಪ ಅವರ ಸಂಸ್ಥೆಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಮಾಡಿಸ್ತಾ ಬಂದಿದ್ದಾರೆ ಹಾಗೂ ನಾನು ನಾಲ್ಕನೇ ತರಗತಿ ಅಲ್ಲಿ ಇದ್ದಾಗ ನಮಗೆ ಯಕ್ಷಗಾನ ಹೇಳಿ ಕೊಡಲಿಕ್ಕೆ ಶಾಲೆಗೆ ಬರ್ತಾ ಇದ್ರು. ಅವರು ಮತ್ತೆ ಬರಲಿಕ್ಕೆ ನಿಲ್ಲಿಸಿದಾಗ ಶಿವರಾಮ ಕಾರಂತರ ಯಕ್ಷ ಕೇಂದ್ರದಲ್ಲಿ ಸೇರಿ ಮತ್ತೆ ಯಕ್ಷಗಾನ ಕಲಿಲಿಕ್ಕೆ ಶುರು ಮಾಡಿದೆ ಎಂದು ಸುಷ್ಮಿತಾ ಹೇಳುತ್ತಾರೆ.
    ಪದವಿ ಶಿಕ್ಷಣವನ್ನು ಆಳ್ವಾಸ್ ಸಂಸ್ಥೆಯ ದತ್ತು ಶಿಕ್ಷಣದಡಿ ಪಡೆದು, ಸ್ನಾತಕೋತ್ತರ ಪದವಿಯನ್ನು  ಡಾ| ಜಿ. ಶಂಕರ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಇಲ್ಲಿ ಅಂತಿಮ ವರ್ಷದ M.Com ಶಿಕ್ಷಣವನ್ನು ಮುಗಿಸಿರುತ್ತಾರೆ.

    ಗುಂಡ್ಮಿ ಸದಾನಂದ ಐತಾಳ, M.N.ಮಧ್ಯಸ್ಥ, ಮಂಟಪ ಪ್ರಭಾಕರ ಉಪಾಧ್ಯ ಇವರ ಬಡಗುತಿಟ್ಟಿನ ಗುರುಗಳು. ದೀವಿತ್ ಕೋಟ್ಯಾನ್, ಆದಿತ್ಯ ಅಂಬಲಪಾಡಿ ಇವರ ತೆಂಕಿನ ಗುರುಗಳು. ಅಭಿಮನ್ಯು ಕಾಳಗ ಹಾಗೂ ಪೌರಾಣಿಕ ಎಲ್ಲ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಸೀತೆ, ಸುಭದ್ರೆ, ಲಕ್ಷ್ಮಿ, ರಾಧೆ, ಅಭಿಮನ್ಯು ಇವರ ನೆಚ್ಚಿನ ವೇಷಗಳು.

    ರಂಗದಲ್ಲಿ ಇವರು ಮಾಡಿರುವ ವೇಷಗಳು:-
    ಸುಭದ್ರೆ, ಕೃಷ್ಣ, ಮಾಯಾಶೂರ್ಪನಖಿ, ಪುಣ್ಯಕೋಟಿ, ಕೌರವ, ಲಕ್ಷ್ಮೀ, ಸೀತೆ, ಬ್ರಹ್ಮ, ಮಾಯ ಪೂತನಿ, ದೇವಬಲ, ರಕ್ಕಸ ಬಲ ಹಾಗೂ ಯಕ್ಷ ರೂಪಕದ ಪುಂಡುವೇಷಗಳು ಮತ್ತು ಸ್ತ್ರೀವೇಷ.

    ಚಿಕ್ಕವಳಿದ್ದಾಗ ಸಾಲಿಗ್ರಾಮ, ಸೌಕೂರು, ಸಿಗಂದೂರು ಮೇಳಗಳಲ್ಲಿ ಬಾಲಗೋಪಾಲ ವೇಷ ಮಾಡಿದ್ದಾರೆ ಹಾಗೂ ಅದು ಬಿಟ್ಟು ವೇಷ ಮಾಡಿದ್ದು ಅಂದ್ರೆ ಆಜ್ರಿ ಮೇಳದಲ್ಲಿ ಒಮ್ಮೆ ಸಣ್ಣ ದೇವಿ ಪಾತ್ರ ಮಾಡಿದ್ದೆ ಎಂದು  ಸುಷ್ಮಿತಾ ಹೇಳುತ್ತಾರೆ.
    ಇವರು ಕೃಷ್ಣನ ಭಕ್ತೆ ಕೃಷ್ಣ ಕುರಿತು ಸೇವೆ ಮಾಡಬೇಕು ಎಂಬ ಯೋಚನೆಯಲ್ಲಿ ಆಳ್ವಾಸ್ ಹಳೆಯ ವಿದ್ಯಾರ್ಥಿಗಳ ಜೊತೆಗೆ ಸೇರಿ ರಾಧನುರಾಗ ಎಂಬ ನಾಟ್ಯ ರೂಪಕವನ್ನು ಪೆರ್ಡೂರು ಮುತ್ತುರ್ಮೆ ಬೃಂದಾವನದಲ್ಲಿ ರಾಧಾ ಕೃಷ್ಣನ ಎದುರು ಸೇವೆ ಮಾಡಿರುತ್ತಾರೆ. ಈ ನೃತ್ಯ ರೂಪಕಕ್ಕೆ ಮಯೂರ್ ನೈಗ ಇವರು ಸಾಹಿತ್ಯವನ್ನು ಬರೆದಿರುತ್ತಾರೆ. ಆಳ್ವಾಸ್ ನುಡಿಸಿರಿ, ವಿರಾಸತ್  ಹಾಗೂ ಆಳ್ವಾಸ್ ಸಾಂಸ್ಕೃತಿಕ ಘಟಕ ವೈಭವಗಳಲ್ಲಿ ಇವರು ಭಾಗವಹಿಸಿದ್ದಾರೆ.
    ಕವನ, ಕಥೆ ಬರೆಯುವುದು, ಜಾನಪದ ನೃತ್ಯ ಹಾಗೂ ಸೆಮಿ ಕ್ಲಾಸಿಕಲ್ ಡಾನ್ಸ್, ನಾಟಕ ಇವರ ಹವ್ಯಾಸಗಳು.

    ಇವರಿಗೆ ಸಿಕ್ಕಿರುವ ಸನ್ಮಾನ ಹಾಗೂ ಪುರಸ್ಕಾರ:-
    ಪಾಂಚಜನ್ಯ ಸಂಘ (ರಿ.) ಪಾರಂಪಳ್ಳಿ ಅವರಿಂದ ಗೌರವ ಸನ್ಮಾನ, ಬಂಡಿಕಡು ಸಾಂಸ್ಕ್ರತಿಕ ಸಂಘದ ಪ್ರತಿಭಾ ಪುರಸ್ಕಾರ, ಆರದಿರಲಿ ಬದುಕು ಆರಾಧನ ತಂಡದ ಪಂಚ ಪ್ರಶಸ್ತಿ, ರಂಗಭೂಮಿಕಾ 2017 ತಂಡ ಪ್ರಶಸ್ತಿ, ಯಕ್ಷೋತ್ಸವ 2018  ತಂಡ ಪ್ರಶಸ್ತಿ, ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ರಂಗ ಸಂಭ್ರಮ 2018.

    ಇವರು ಕಲಿತ ಚಿತ್ರಪಾಡಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಣ್ಯಕೋಟಿ ಎಂಬ ಯಕ್ಷರೂಪಕವನ್ನು ಹೇಳಿ ಕೊಟ್ಟಿರುವ ಇವರ ಯಕ್ಷರೂಪಕ 3 ಪ್ರದರ್ಶನಗಳನ್ನು ಕಂಡಿದೆ. ಕಾಲೇಜಿನ ವಾರ್ಷಿಕೋತ್ಸವದ ಸಮಯದಲ್ಲಿ ದಶಾವತಾರ ಎನ್ನುವ ಯಕ್ಷರೂಪಕವನ್ನು ಆದಿತ್ಯ ಅಂಬಲಪಾಡಿ ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿ ಈ ಮೂಲಕ ಕಾಲೇಜಿನ ಪ್ರಾಂಶುಪಾಲರು ಹಾಗೂ ಜಿ ಶಂಕರ್ ಅವರ ಪ್ರಶಂಸೆಯನ್ನು ಗಳಿಸುತ್ತಾರೆ.

    ರಂಗಕ್ಕೆ ಹೋಗುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-
    ಸರಿಯಾದ ಪ್ರಾಕ್ಟೀಸ್ ಆದ್ಮೇಲೆ ನಾನು ರಂಗಕ್ಕೆ ಹೋಗ್ತಾ ಇದ್ದೆ. ನಮ್ಮದೇ ತಂಡದವರೆಲ್ಲ ಕೂತು ಒಮ್ಮೆ ಮಾತಾಡಿ ಮತ್ತೆ ಪ್ರಾಕ್ಟೀಸ್ ಶುರು ಮಾಡ್ತ ಇದ್ವಿ ಹಾಗೂ ಗುರುಗಳ ಹತ್ತಿರ ಹೋಗಿ ಕೇಳುತ್ತಿದ್ದೆ ಎಂದು ಹೇಳುತ್ತಾರೆ.

    ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
    ಬಹುಶಃ ಈ ದಿನಗಳಲ್ಲಿ ಯಕ್ಷಗಾನವನ್ನ ತುಂಬಾ ಇಷ್ಟ ಪಡ್ತಾ ಇದ್ದಾರೆ. ಒಂದು ಕಲೆ ಉಳಿಯಬೇಕಾದರೆ ಹಾಗೆ ಬೆಳೆಯಬೇಕಾದರೆ ಕಲಾವರ್ಗ ಹಾಗೂ ಪ್ರೇಕ್ಷಕ ವರ್ಗ ಮುಖ್ಯ ಆಗ್ತದೆ. ಕಲೆ ಹಾಗೂ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಕೂಡ ಸಿಗ್ತಾ ಉಂಟು. ತುಂಬಾ ಖುಷಿ ಆಗ್ತದೆ. ಈ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಸುಷ್ಮಿತಾ ಅವರು ಹೇಳುತ್ತಾರೆ.

    ಮುಂದಿನ ಕನಸು ಹಾಗೂ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ:-
    ಉಪನ್ಯಾಸಕಿ ಆಗುವ ಕನಸಿದೆ ಹಾಗೂ ಇದರ ಜೊತೆಯಲ್ಲಿ ಹವ್ಯಾಸವಾದ ಬರಹ ಹಾಗೂ ಯಕ್ಷಗಾನವನ್ನು ಬಿಡುವಿನ ಸಮಯದಲ್ಲಿಯೂ ಸಮಯ ಕೊಟ್ಟು ಇನ್ನೂ ಕಲಿಯುವ ಮನಸ್ಸಿದೆ ಎಂದು ಸುಷ್ಮಿತಾ ಅವರು ಹೇಳುತ್ತಾರೆ.

    ಮುಖ್ಯವಾಗಿ ನನ್ನ ಎಲ್ಲಾ ಕಲೆಗೆ ಆಸೆಗಳಿಗೆ ಬೆನ್ನೆಲುಬಾಗಿ ನಿಂತವರು ನನ್ನ ತಂದೆ ತಾಯಿ.  ಗುರುಗಳು ಹಾಗೂ ಗೆಳೆಯರು, ಫ್ಯಾಮಿಲಿ ಸದಸ್ಯರು.
    ಇದರ ಜೊತೆಯಲ್ಲಿ ಇವರ ಕಲೆಗೆ ಪ್ರೋತ್ಸಾಹ ಕೊಟ್ಟು ಉಚಿತ ಶಿಕ್ಷಣವನ್ನು ನೀಡಿದ  ಡಾ.ಮೋಹನ್ ಆಳ್ವಾ ಸರ್  ಅವರಿಗೆ ನಾನು ಆಭಾರಿ ಹಾಗೂ ಡಾ.ಜಿ ಶಂಕರ್ ಮಹಿಳಾ ಕಾಲೇಜಿನ ಮಹಾ ಪೋಷಕರು ಡಾ! ಜಿ ಶಂಕರ್ ಸರ್ ಮತ್ತು ಪ್ರಾಂಶುಪಾಲರು ಹಾಗೂ M.Com  co-ordinator  ಆಗಿರುವ ಡಾ.ಉಮೇಶ್ ಮಯ್ಯ ಸರ್ ಹಾಗೂ ಕಾಲೇಜಿನ ಸಾಂಸ್ಕ್ರತಿಕ ಸಂಚಾಲಕಿಯವರಾದ ವಾಣಿ ಬಲ್ಲಾಳ್ ಮೇಡಂ ಇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುಷ್ಮಿತಾ  ಅವರು ಹೇಳುತ್ತಾರೆ.

    ಚಿತ್ರ ಕೃಪೆ: Prashanth Malyadi, D.P.K

    ಶ್ರವಣ್ ಕಾರಂತ್ ಕೆ.,
    ಮಂಗಳೂರು

    art artforms artist Indian saligrama shravankaranth sushmitha talen talented yakshagana
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ – ಕುಂಚ ಬ್ರಹ್ಮ ಮಾಡಿವಾಳಪ್ಪ ವೀರಪ್ಪ ಮಿಣಜಿಗಿ
    Next Article ಒಡಿಯೂರು ತುಳು ಸಮ್ಮೇಳನ ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆ
    roovari

    Add Comment Cancel Reply


    Related Posts

    ಧಾರವಾಡದಲ್ಲಿ ಡಾ. ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ | ಮೇ 08

    May 7, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.