ಯಕ್ಷಗಾನ ರಂಗಕ್ಕೆ ಇವರು ವೇಷಧಾರಿಯಾಗಿ ಬಂದವರು. ನಂತರ ಹಿಮ್ಮೇಳದ ಕಡೆಗೆ ಒಲವು ಮೂಡಿ ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವವರು ವಿಶ್ವಂಭರ ಅಲ್ಸೆ, ಐರೋಡಿ.
17.04.2002 ರಂದು ವಿಶ್ವನಾಥ ಅಲ್ಸೆ, ಐರೋಡಿ ಹಾಗೂ ವೀಣಾ ಅಲ್ಸೆ ಇವರ ಮಗನಾಗಿ ಜನನ. MCOM ಇವರ ವಿದ್ಯಾಭ್ಯಾಸ.
ಯಕ್ಷಗಾನ ಗುರುಗಳು:-
ಮಂಜುನಾಥ ಕುಲಾಲ್ ಐರೋಡಿ ಹಾಗೂ ಪ್ರತೀಶ್ ಕುಮಾರ್, ಬ್ರಹ್ಮಾವರ ಹೆಜ್ಜೆಗಾರಿಕೆ ಗುರುಗಳು.
ಶಿವಾನಂದ, ಕೋಟ ಚಂಡೆಯ ಗುರುಗಳು.
ದೇವದಾಸ್ ರಾವ್, ಕೂಡ್ಲಿ ಮದ್ದಳೆಯ ಗುರುಗಳು.
ನೆಚ್ಚಿನ ಚೆಂಡೆ ಹಾಗೂ ಮದ್ದಳೆಗಾರರು:
ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ ಇವರ ಮದ್ದಳೆ ಮತ್ತು ಚಂಡೆಯನ್ನು ತುಂಬಾ ಇಷ್ಟ ಪಡುತ್ತೇನೆ. ಇವರನ್ನು ಬಿಟ್ಟರೆ ಶಶಾಂಕ್ ಆಚಾರ್, ರಾಘವೇಂದ್ರ ಹೆಗಡೆ, ಕೆ.ಜೆ. ಸುಧೀಂದ್ರ ಆಚಾರ್.
ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ, ರಾಧಾಕೃಷ್ಣ ಕುಂಜತ್ತಾಯ, ಸುಜನ್ ಹಾಲಾಡಿ.
ನೆಚ್ಚಿನ ಭಾಗವತರು:
ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗಣೇಶ್ ಆಚಾರ್ ಬಿಲ್ಲಾಡಿ.
ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ, ಇಂದ್ರಪ್ರಸ್ಥ, ಶುಕ್ರನಂದನೆ, ಜೊತೆಗೆ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಹಿಮ್ಮೇಳ ಮತ್ತು ಮುಮ್ಮೇಳ ಎರಡರಲ್ಲೂ ಯುವ ಕಲಾವಿದರೇ ಹೆಚ್ಚು ಮಿಂಚುತ್ತಿರುವುದು ಖುಷಿಯ ವಿಚಾರ. ಯಕ್ಷಗಾನವೆಂಬ ಸುಂದರ ಕಲೆಯಲ್ಲಿ ಅನೇಕ ಯುವ ಕಲಾವಿದರೇ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಯಕ್ಷಗಾನ ರಂಗದಲ್ಲಿ ಹವ್ಯಾಸಿ ಕಲಾವಿದನಾಗಿಯೇ ಮುಂದುವರೆಯಲು ಇಷ್ಟ ಪಡುತ್ತೇನೆ.
ವೀರ ಚಂದ್ರಹಾಸ ಚಿತ್ರದಲ್ಲಿ ಅವಕಾಶ ಕೊಡಿಸಿದ ರವಿ ಬಸ್ರೂರು ಮತ್ತು ನಾಗರಾಜ ನೈಕಂಬ್ಳಿಯವರಿಗೆ ಚಿರಋಣಿಯಾಗಿದ್ದೇನೆ.
ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಮತ್ತು ಶಿವಾನಂದ ಕೋಟರಂತಹ ಯಕ್ಷ ದಿಗ್ಗಜರೊಂದಿಗೆ ಯಕ್ಷಲೋಕಕ್ಕೆ ಅಂಬೆಗಾಲನ್ನು ಇಡುತ್ತಿರುವ ನನಗೆ ಅವಕಾಶ ದೊರೆತದ್ದು ನನ್ನ ಪಾಲಿನ ಪುಣ್ಯವೇ ಸರಿ.
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಜೊತೆಗೆ ಕೆಲಸ ಮಾಡಿದ ಅನುಭವ ತುಂಬಾ ಖುಷಿ ಕೊಟ್ಟಿದೆ. ಅವರಿಗೂ ಅವರ ತಂಡಕ್ಕೂ ಶುಭವಾಗಲಿ ಎಂದು ಆಶಿಸುತ್ತೇನೆ.
ಹಟ್ಟಿಯಂಗಡಿ, ಮೆಕ್ಕೆಕಟ್ಟು, ಮಂದಾರ್ತಿ, ಮಾರಣಕಟ್ಟೆ, ಮೇಳದಲ್ಲಿ ಕಲಾವಿದರು ರಜೆಯಲ್ಲಿ ಇರುವಾಗ ಹೋಗಿ ಸೇವೆಯನ್ನು ಮಾಡಿರುತ್ತಾರೆ ಹಾಗೂ ಯಕ್ಷಗಾನ ರಂಗದಲ್ಲಿ ಒಟ್ಟು 5 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಚಂಡೆ ಮದ್ದಳೆಗಳ ಜೊತೆಗೆ ರಿದಂ ಪ್ಯಾಡ್ ನುಡಿಸುವುದು, ಹಳೆಯ ನಾಣ್ಯಗಳ ಸಂಗ್ರಹಣೆ, ಹಾಡನ್ನು ಕೇಳುವುದು ಇವರ ಹವ್ಯಾಸಗಳು.
ಹಲವಾರು ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿರುತ್ತಾರೆ ವಿಶ್ವಂಭರ ಅಲ್ಸೆ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ವಿಶ್ವಂಭರ ಅಲ್ಸೆ, ಐರೋಡಿ.
- ಶ್ರವಣ್ ಕಾರಂತ್ ಕೆ.
ಶಕ್ತಿನಗರ ಮಂಗಳೂರು