ಯಕ್ಷಗಾನವು ನಮ್ಮ ಹೆಮ್ಮೆಯ ಸಂಕೇತ ಎನಿಸಿಕೊಂಡ ಕಲೆ. ಹಿಂದಿನ ತಲೆಮಾರಿನ, ಈಗಿನ ಹಿರಿಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳೆಲ್ಲಾ ತ್ಯಾಗ ಪರಿಶ್ರಮಗಳಿಂದ ಈ ಸರ್ವಾಂಗ ಸುಂದರವಾದ ಕಲಾಪ್ರಕಾರವನ್ನು ಬೆಳೆಸಿದ್ದಾರೆ, ಉಳಿಸಿದ್ದಾರೆ. ಇಂತಹ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವ ಕಲಾವಿದ ಪ್ರವೀಣ್ ಮೊಗವೀರ.
03.03.1993ರಂದು ಆರ್ ಮಂಜುನಾಥ್ ಮತ್ತು ಗಿರಿಜಾ ದಂಪತಿಗಳ ಮಗನಾಗಿ ಜನನ. ಬಿಕಾಂ ಇವರ ವಿದ್ಯಾಭ್ಯಾಸ. ವೃತ್ತಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಹಕಾರ ಸಂಘ ನಿ. ಕುಂದಾಪುರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅಜ್ಜನಾದ ಬೇಲ್ತುರೂ ರಮೇಶ್ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ನವೀನ್ ಕೋಟ ಇವರ ಯಕ್ಷಗಾನದ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ನಾವು ಎಷ್ಟು ಕಲಿತರು ಯಕ್ಷಗಾನ ರಂಗದಲ್ಲಿ ಕಲಿಯಲು ಬಹಳಷ್ಟಿದೆ. ಅದಕ್ಕೆ ವೇಷಕ್ಕೆ ಮೊದಲು ಹಿರಿಯರಲ್ಲಿ ಕೇಳಿ ಹೋಗುವುದು ಒಳ್ಳೆಯದು ಎಂದು ಪ್ರವೀಣ್ ಅವರ ಅಭಿಪ್ರಾಯ.
ಪೌರಾಣಿಕ ಪ್ರಸಂಗಗಳಾದ ಕಂಸ ವಧೆ, ದೇವಿ ಮಹಾತ್ಮೆ, ವಧು ವೈಶಾಲಿನಿ , ಲವ ಕುಶ ಹೀಗೆ ಅನೇಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಕಂಸ, ಮಹಿಷ, ಮಧು ಕೈಟಭ , ವಿದ್ಯುನ್ಮಾಲಿ, ಜಾಂಬವ, ಹನುಮಂತ, ವೀರಮಣಿ ಇತ್ಯಾದಿ ಇವರ ನೆಚ್ಚಿನ ವೇಷಗಳು ಹಾಗೂ ಖಳ ನಾಯಕ ವೇಷದಲ್ಲಿ ಆಸಕ್ತಿ ಜಾಸ್ತಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಒಂದು ಬೇಸರದ ಸಂಗತಿ; ಎಲ್ಲಾ ಪ್ರಸಂಗಕ್ಕೆ ತಕ್ಕಂತೆ ಇರುವ ಬದಲು ಅವರಿಗೆ ತಕ್ಕಂತೆ ಹೋಗುತ್ತದೆ ಪ್ರಸಂಗ.. ಅಷ್ಟೇ ಬೇಸರ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಕಲಾವಿದರು ತಪ್ಪಿದನ್ನು ಅಲ್ಲೇ ಹೇಳಿ ಬಂದ್ರೆ ಒಳ್ಳೆಯದು. ಮುಂದೆ ಬದಲಾವಣೆ ಆಗಬಹುದು ಅಂತ ಅನಿಸಿಕೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನದಲ್ಲಿ ನಾನು ಬೆಳೆದು ಬಂದಿದ್ದು ಹವ್ಯಾಸಿಯಾಗಿ. ಅದಕ್ಕೆ ಹವ್ಯಾಸಿ ಯಕ್ಷಗಾನಕ್ಕೆ ಅಗ್ರಸ್ಥಾನವನ್ನು ಕೊಡುತ್ತೇನೆ.
ವೃತ್ತಿಯಲ್ಲಿ ಯಾವ ಮೇಳಕ್ಕು ಹೋಗಿಲ್ಲ. ಆದರೆ ಬದಲಿಗೆ ಅನೇಕ ಮೇಳದಲ್ಲಿ ವೇಷ ಹಾಕಿದ್ದೆ. ಸೌಕೂರು, ಹಟ್ಟಿಯಂಗಡಿ, ಮಡಾಮಕ್ಕಿ , ನೀಲಾವರ, ಬೊಳಂಬಲ್ಲಿ, ಮೇಗರವಳ್ಳಿ, ಆಜ್ರಿ, ಹಾಲಾಡಿ ಹೀಗೆ ಹಾಗೂ ಅನೇಕ ಹವ್ಯಾಸಿ ಯಕ್ಷಗಾನ ಸಂಘದಲ್ಲಿ ವೇಷ ಮಾಡಿದ್ದೇನೆ.
ಯಕ್ಷಗಾನ ಹೆಜ್ಜೆ ತರಬೇತಿ ನೀಡುವುದು, ಯಕ್ಷಗಾನ ಬಣ್ಣಗಾರಿಕೆ ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು