Subscribe to Updates

    Get the latest creative news from FooBar about art, design and business.

    What's Hot

    ನಾಮ ಸಂಕೀರ್ತನ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿ | ಜೂನ್ 18ರಿಂದ

    June 15, 2026

    ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆ

    June 15, 2026

    ಕನಕದಾಸ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ

    June 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪರಿಚಯ ಲೇಖನ | “ಯಕ್ಷಕಲಾ ಪ್ರವೀಣ” – ಪ್ರವೀಣ್ ಮೊಗವೀರ
    Article

    ಪರಿಚಯ ಲೇಖನ | “ಯಕ್ಷಕಲಾ ಪ್ರವೀಣ” – ಪ್ರವೀಣ್ ಮೊಗವೀರ

    June 11, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಕ್ಷಗಾನವು ನಮ್ಮ ಹೆಮ್ಮೆಯ ಸಂಕೇತ ಎನಿಸಿಕೊಂಡ ಕಲೆ. ಹಿಂದಿನ ತಲೆಮಾರಿನ, ಈಗಿನ ಹಿರಿಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳೆಲ್ಲಾ ತ್ಯಾಗ ಪರಿಶ್ರಮಗಳಿಂದ ಈ ಸರ್ವಾಂಗ ಸುಂದರವಾದ ಕಲಾಪ್ರಕಾರವನ್ನು ಬೆಳೆಸಿದ್ದಾರೆ, ಉಳಿಸಿದ್ದಾರೆ. ಇಂತಹ  ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವ ಕಲಾವಿದ ಪ್ರವೀಣ್ ಮೊಗವೀರ.

    03.03.1993ರಂದು ಆರ್ ಮಂಜುನಾಥ್ ಮತ್ತು ಗಿರಿಜಾ ದಂಪತಿಗಳ ಮಗನಾಗಿ ಜನನ. ಬಿಕಾಂ ಇವರ ವಿದ್ಯಾಭ್ಯಾಸ. ವೃತ್ತಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಹಕಾರ ಸಂಘ ನಿ. ಕುಂದಾಪುರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅಜ್ಜನಾದ ಬೇಲ್ತುರೂ ರಮೇಶ್ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ನವೀನ್ ಕೋಟ ಇವರ ಯಕ್ಷಗಾನದ ಗುರುಗಳು.

    ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
    ನಾವು ಎಷ್ಟು ಕಲಿತರು ಯಕ್ಷಗಾನ ರಂಗದಲ್ಲಿ ಕಲಿಯಲು ಬಹಳಷ್ಟಿದೆ. ಅದಕ್ಕೆ ವೇಷಕ್ಕೆ ಮೊದಲು ಹಿರಿಯರಲ್ಲಿ ಕೇಳಿ ಹೋಗುವುದು ಒಳ್ಳೆಯದು ಎಂದು ಪ್ರವೀಣ್ ಅವರ ಅಭಿಪ್ರಾಯ.

    ಪೌರಾಣಿಕ ಪ್ರಸಂಗಗಳಾದ ಕಂಸ ವಧೆ, ದೇವಿ ಮಹಾತ್ಮೆ, ವಧು ವೈಶಾಲಿನಿ , ಲವ ಕುಶ ಹೀಗೆ ಅನೇಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
    ಕಂಸ, ಮಹಿಷ, ಮಧು ಕೈಟಭ , ವಿದ್ಯುನ್ಮಾಲಿ, ಜಾಂಬವ, ಹನುಮಂತ, ವೀರಮಣಿ ಇತ್ಯಾದಿ ಇವರ ನೆಚ್ಚಿನ ವೇಷಗಳು ಹಾಗೂ ಖಳ ನಾಯಕ ವೇಷದಲ್ಲಿ ಆಸಕ್ತಿ ಜಾಸ್ತಿ.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಒಂದು ಬೇಸರದ ಸಂಗತಿ; ಎಲ್ಲಾ ಪ್ರಸಂಗಕ್ಕೆ ತಕ್ಕಂತೆ ಇರುವ ಬದಲು ಅವರಿಗೆ ತಕ್ಕಂತೆ ಹೋಗುತ್ತದೆ ಪ್ರಸಂಗ.. ಅಷ್ಟೇ ಬೇಸರ.

    ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಕಲಾವಿದರು ತಪ್ಪಿದನ್ನು ಅಲ್ಲೇ ಹೇಳಿ ಬಂದ್ರೆ ಒಳ್ಳೆಯದು. ಮುಂದೆ ಬದಲಾವಣೆ ಆಗಬಹುದು ಅಂತ ಅನಿಸಿಕೆ.

    ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
    ಯಕ್ಷಗಾನದಲ್ಲಿ ನಾನು ಬೆಳೆದು ಬಂದಿದ್ದು ಹವ್ಯಾಸಿಯಾಗಿ. ಅದಕ್ಕೆ ಹವ್ಯಾಸಿ ಯಕ್ಷಗಾನಕ್ಕೆ ಅಗ್ರಸ್ಥಾನವನ್ನು ಕೊಡುತ್ತೇನೆ.

    ವೃತ್ತಿಯಲ್ಲಿ ಯಾವ ಮೇಳಕ್ಕು ಹೋಗಿಲ್ಲ. ಆದರೆ ಬದಲಿಗೆ ಅನೇಕ ಮೇಳದಲ್ಲಿ ವೇಷ ಹಾಕಿದ್ದೆ. ಸೌಕೂರು, ಹಟ್ಟಿಯಂಗಡಿ, ಮಡಾಮಕ್ಕಿ , ನೀಲಾವರ, ಬೊಳಂಬಲ್ಲಿ, ಮೇಗರವಳ್ಳಿ, ಆಜ್ರಿ, ಹಾಲಾಡಿ ಹೀಗೆ ಹಾಗೂ ಅನೇಕ ಹವ್ಯಾಸಿ ಯಕ್ಷಗಾನ ಸಂಘದಲ್ಲಿ ವೇಷ ಮಾಡಿದ್ದೇನೆ.
    ಯಕ್ಷಗಾನ ಹೆಜ್ಜೆ ತರಬೇತಿ ನೀಡುವುದು, ಯಕ್ಷಗಾನ ಬಣ್ಣಗಾರಿಕೆ ಇವರ ಹವ್ಯಾಸಗಳು.

    ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು

    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಡಾ.ಕಯ್ಯಾರ ಕಿಞ್ಞಣ್ಣ ರೈ 108ನೇ ಜನ್ಮ ದಿನಾಚರಣೆ
    Next Article ‘ಕರುಂಬಿತ್ತಿಲ್ ಸಂಗೀತ ಶಿಬಿರ 2023’
    roovari

    Add Comment Cancel Reply


    Related Posts

    ಚರಿತ್ರಾರ್ಹ ದಾಖಲೆಯ ಸಿರಿಬಾಗಿಲ ‘ಬೆಳಕಿನ ಕಿರಣ’ ವಿಚಾರಗೋಷ್ಠಿ

    June 15, 2026

    ಗುಂಡ್ಮಿ ಸಾಲಿಗ್ರಾಮದಲ್ಲಿ ಉಚಿತ ಯಕ್ಷಗಾನ ತರಬೇತಿ | ಜೂನ್ 20ರಿಂದ

    June 15, 2026

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026

    ಮಂಗಳಾದೇವಿ ದೇವಸ್ಥಾನದಲ್ಲಿ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 14

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.