ಮೂಲ್ಕಿ : ನಿಮ್ಮಲ್ಲಿರುವ ರಾಶಿ ರಾಶಿ ಪುಸ್ತಕಗಳನ್ನು ಓದುವವರಿಲ್ಲವೆ ? ನಿಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳು ಇವೆ, ಕಥಾ ಸಂಕಲನ, ಕಾದಂಬರಿಗಳಿವೆ, ಮಕ್ಕಳ ಪುಸ್ತಕಗಳಿವೆ. ಹಳೆಯ ಮಾಸಪತ್ರಿಕೆಗಳಿವೆ. ಆದರೆ ಓದುವವರಿಲ್ಲ. ಗುಜರಿಗೆ ಹಾಕಲು ಮನಸ್ಸೊಪ್ಪುತ್ತಿಲ್ಲ. ಅರ್ಹರ ಕೈಗೆ ಈ ಪುಸ್ತಕಗಳು ಸಿಕ್ಕರೆ ಸಮಾಧಾನ… ಇಂತಹ ಮನಸ್ಥಿತಿಯಲ್ಲಿದ್ದೀರಾ..
ದಿನಾಂಕ 08 ಫೆಬ್ರವರಿ 2025ರಂದು ನಡೆಯಲಿರುವ ಮೂಲ್ಕಿ ತಾಲೂಕು 2ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ, ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಬೇಕೆಂಬ ಸಂಕಲ್ಪ ನಮ್ಮದು. ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ನಾವು ಹಂಚುತ್ತೇವೆ. ನಿಮ್ಮ ಹೆಸರು ಬರೆದು, ನಿಮ್ಮಲ್ಲಿರುವ ಸಾಹಿತ್ಯ ಪುಸ್ತಕಗಳನ್ನು, ಮಕ್ಕಳ ಪುಸ್ತಕಗಳನ್ನು ನಮಗೆ ಕೊಡಿ ಅಥವಾ ಸಮ್ಮೇಳನದಲ್ಲಿ ನೀವೇ ಆಸಕ್ತರಿಗೆ ಹಂಚರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9845362763.