ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸಣ್ಣ ಕಥೆ ರಚನೆ (ಎ4 ಅಳತೆಯ ಹಾಳೆಯಲ್ಲಿ ಒಂದು ಪುಟ ಮೀರದಂತೆ ಇರಬೇಕು), ಕವನ ರಚನೆ ಸ್ಪರ್ಧೆ (12 ಸಾಲು ಮೀರಬಾರದು), ನಾನು ಓದಿದ ಉತ್ತಮ ಪುಸ್ತಕ (ಎ4 ಹಾಳೆಯಲ್ಲಿ ಎರಡು ಪುಟ) ಮೀರದಂತೆ ಇರಬೇಕು. ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿರುವ, ಉದ್ಯೋಗ, ವ್ಯವಹಾರದಲ್ಲಿರುವವರು ಮತ್ತು ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದು ರಾಜ್ಯ, ದೇಶ, ವಿದೇಶಗಳಲ್ಲಿ ವಾಸವಾಗಿರುವ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸಬಹುದು.
ಪ್ರತಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು 25 ಮಂದಿಗೆ ಆಯ್ಕೆ ಸಮಿತಿಯವರು ಗುರುತಿಸಲ್ಪಟ್ಟ ಸಣ್ಣ ಕಥೆ, ಕವನ, ಪ್ರಬಂಧ ರಚಿಸಿದ ಸಾಹಿತ್ಯಾಸಕ್ತರಿಗೆ ವಿಶೇಷ ಬಹುಮಾನ, ಪ್ರಮಾಣ ಪತ್ರ, ಸ್ಮರಣೆಕೆಯೊಂದಿಗೆ ಗೌರವಿಸಲಾಗುವುದು. ಸಾಹಿತ್ಯಾಸಕ್ತ ಬಂಧುಗಳು, ಶಿವರಾಮ ಕಾಸರಗೋಡು, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು -671121 ಮೊಬೈಲ್ : 9448572016, 9901951965 ಈ ವಿಳಾಸಕ್ಕೆ ದಿನಾಂಕ 28 ಫೆಬ್ರವರಿ 2025ರ ಒಳಗಾಗಿ ಅಂಚೆ ಮೂಲಕ ಕಳುಹಿಸಲು ಕೋರಲಾಗಿದೆ. ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ವಿಭಾಗದ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸುವುದಕ್ಕಾಗಿ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.