ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಪ್ರತಿ ಹುಣ್ಣಿಮೆಯಂದು ಆಯೋಜಿಸಲಾಗುತ್ತಿರುವ ‘ಸಾಹಿತ್ಯ ಹುಣ್ಣಿಮೆ’ ಕಾರ್ಯಕ್ರಮದ 253ನೇ ತಿಂಗಳ ಕಾರ್ಯಕ್ರಮವನ್ನು ಶ್ರಾವಣ ಮಾಸದ ಪ್ರಯುಕ್ತ ವಿಶೇಷವಾಗಿ ಶ್ರಾವಣ ಸಂಭ್ರಮವಾಗಿ ಆಗಸ್ಟ್ 30ರ ಭಾನುವಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
ಕಾವ್ಯ ಸಂಭ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಕವಿಗಳು ತಮ್ಮ ಕವನವನ್ನು ಮುಂಚಿತವಾಗಿ ಕಳುಹಿಸಿ, ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಆಯ್ಕೆಯಾದ ಕವಿಗಳಿಗೆ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶ ಕಲ್ಪಿಸಲಾಗುವುದು. ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕನಿಷ್ಠ ಐದು ಜನರ ತಂಡವಾಗಿ ಕನ್ನಡದ ಭಾವಗೀತೆಗಳನ್ನು ಹಾಡಲು ಭಾಗವಹಿಸಬಹುದು. ಆಸಕ್ತ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ತಂಡಗಳಿಗೂ ಶ್ರಾವಣ ಸಂಭ್ರಮದ ವೃಂದಗಾನದಲ್ಲಿ ಭಾಗವಹಿಸಲು ಅವಕಾಶವಿದೆ.
ವೃಂದಗಾನದಲ್ಲಿ ಭಾಗವಹಿಸುವವರು ತಂಡದ ಹೆಸರು, ಹಾಡಿನ ಹೆಸರು ಹಾಗೂ ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ದಿನಾಂಕ 23 ಆಗಸ್ಟ್ 2026ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಡಿ. ಮಂಜುನಾಥ ಕೋರಿದ್ದಾರೆ. ನೋಂದಣಿಗಾಗಿ ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ -9449552795, ಡಿ. ಗಣೇಶ್, ಕಾರ್ಯದರ್ಶಿ 9901331667, ಕೆ.ಎಸ್. ಮಂಜಪ್ಪ – 94499 21951, ಮಹಾದೇವಿ 80730 52370, ಸ್ವಾಮಿ 94488 56911, ಭೈರಾಪುರ ಶಿವಪ್ಪ ಮೇಷ್ಟ್ರು 9449911652 ಸಂಪರ್ಕಿಸಬಹುದಾಗಿದೆ.
