ಬಳ್ಳಾರಿ : ಶ್ರೀ ಮಹಾದೇವ ಎಜುಕೇಷನ್, ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ.) ಬಳ್ಳಾರಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘ (ರಿ.) ಜಿಲ್ಲಾ ಘಟಕ ಬಳ್ಳಾರಿ ಮತ್ತು ಅಖಿಲ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಬಳ್ಳಾರಿ ಇವರು ಜಂಟಿಯಾಗಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ 2025 ಪ್ರಯುಕ್ತ ಕವಿಗೋಷ್ಠಿಯನ್ನು ದಿನಾಂಕ 30 ನವೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕವಿತೆಯನ್ನು ನುಡಿ / ಯೂನಿಕೋಡ್ ನಲ್ಲಿ ಟೈಪ್ ಮಾಡಿ ವರ್ಡ್ ಫೈಲ್ ರೂಪದಲ್ಲಿ ಈ ಕೆಳಗಿನ ವಿವರಗಳೊಂದಿಗೆ ಕಳುಹಿಸಿ. ಪೂರ್ಣ ಹೆಸರು, ಹುದ್ದೆ, ಹುಟ್ಟಿದ ದಿನಾಂಕ / ವಯಸ್ಸು / ವಿಲಾಸ / ಇ-ಮೇಲ್ / ಮೊಬೈಲ್ ಸಂಖ್ಯೆ / ಒಂದು ಪಾಸ್ ಪೋರ್ಟ್ ಸೈಜ್ ಭಾವಚಿತ್ರ. ಕಳುಹಿಸಬೇಕಾದ ಇ-ಮೇಲ್ [email protected].

 
									 
					