ಮಂಗಳೂರು : ಕಥಾಬಿಂದು ಪ್ರಕಾಶನದ ವತಿಯಿಂದ ಯುಗಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ದಿನಾಂಕ 27 ಫೆಬ್ರವರಿ 2026ರಂದು ನಡೆಯಲಿರುವ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಪ್ರಕೃತಿ, ದೇಶಭಕ್ತಿ, ನಾಡುನುಡಿ, ಶಿಕ್ಷಣ, ಮಹಾಪುರುಷರು ಎಂಬ ವಿಷಯಗಳಲ್ಲಿ ಸ್ವರಚಿತ ಕವನ ರಚಿಸಿ ದಿನಾಂಕ 22 ಫೆಬ್ರವರಿ 2026ರ ಒಳಗೆ ಕಳುಹಿಸಬೇಕು. ಕವನಗಳು 20 ಸಾಲುಗಳಿಗೆ ಮೀರದಿರಲಿ. ಆಯ್ಕೆಯಾದ ಕವಿಗಳು 27 ಫೆಬ್ರವರಿ 2026ರಂದು ಕಿನ್ನಿಗೋಳಿಯಲ್ಲಿ ಅಪರಾಹ್ನ 2-00 ಗಂಟೆ ಮುಂಚಿತವಾಗಿ ಹಾಜರಿರಬೇಕು. ಭಾಗವಹಿಸಿದ ಕವಿಗಳ ಕವನಗಳನ್ನು ಪರಿಚಯದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಸಂಯೋಜಕ ಜಯಾನಂದ ಪೆರಾಜೆ 9448348234 ಇವರನ್ನು ಸಂಪರ್ಕಿಸಬಹುದು ಎಂದು ಕಥಾಬಿಂದು ಪ್ರಕಾಶನದ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
