ಮೈಸೂರು : ಸಮತಾ ಅಧ್ಯಯನ ಕೇಂದ್ರವು ಸಂಸ್ಥಾಪಕ ಅಧ್ಯಕ್ಷೆ ವಿಜಯಾ ದಬ್ಬೆಯವರ ಹೆಸರಿನಲ್ಲಿ ಸ್ಥಾಪಿಸಿರುವ ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿಯರಿಂದ ಕಥಾಸಂಕಲನಗಳನ್ನು ಆಹ್ವಾನಿಸಿದೆ. 2022-2025ರ ಅವಧಿಯಲ್ಲಿ ಪ್ರಥಮ ಮುದ್ರಣ ಕಂಡ ಸಂಕಲನಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿಯು ರೂ.25,000/- ನಗದು ಮತ್ತು ಫಲಕವನ್ನು ಒಳಗೊಂಡಿದ್ದು, ದಿನಾಂಕ 01 ಜೂನ್ 2026ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು.
ಸಂಕಲನದ ನಾಲ್ಕು ಪ್ರತಿಗಳನ್ನು ಕಳುಹಿಸಲು ದಿನಾಂಕ 28 ಫೆಬ್ರುವರಿ 2026 ಕಡೆಯ ದಿನವಾಗಿದೆ. ವಿಳಾಸ : ಎಂ.ಎಸ್. ವೇದಾ, ಅಲಂಪು, 1257, ಪಡುವಣ ರಸ್ತೆ, 4ನೇ ತಿರುವು, ಟಿ.ಕೆ. ಬಡಾವಣೆ, 4ನೇ ಹಂತ, ಕುವೆಂಪು ನಗರ, ಮೈಸೂರು-570023. ಮಾಹಿತಿಗೆ ಮೊ. ಸಂ. 9481814836 ಸಂಪರ್ಕಿಸಲು ಅಧ್ಯಕ್ಷೆ ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.
