ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 40 ವರ್ಷದೊಳಗಿನ ಹೊಸ ಪೀಳಿಗೆಯ ಲೇಖಕ/ಕಿಯರ ಆಯ್ದ ಕಥೆ, ಪ್ರಬಂಧ ಮತ್ತು ಲೇಖನಗಳ ಸಂಯುಕ್ತ ಸಂಪುಟವೊಂದನ್ನು ಯುವ ಸಂಘಟಕ ಶ್ರೀ ಸೋಮನಾಥ ಶೇಷಗಿರಿ ಮತ್ತು ಯುವ ಲೇಖಕಿ ಕುಮಾರಿ ಮಧು ಕಾರಗಿಯವರ ಸಂಪಾದಕತ್ವದಲ್ಲಿ ಹೊರ ತರಲಿದೆ. ಆಸಕ್ತ ಲೇಖಕ/ಕಿಯರು ನಿಯಮಾನುಸಾರವಾಗಿ ಕಥೆ, ಪ್ರಬಂಧ, ಲೇಖನ ಕಳುಹಿಸಬಹುದು.
ನಿಯಮಗಳು :
40 ವರ್ಷದೊಳಗಿನ ಲೇಖಕ/ಕಿಯರು ಮಾತ್ರ ಬರಹಗಳನ್ನು ಕಳುಹಿಸಬಹುದು.
ಕಥೆ, ಲಲಿತ ಪ್ರಬಂಧ, ಪ್ರವಾಸ ಪ್ರಬಂಧ, ಐತಿಹಾಸಿಕ ಲೇಖನ, ವೈಜ್ಞಾನಿಕ ಲೇಖನ ಮತ್ತು ಸಿನಿಮಾ ಕುರಿತ ಲೇಖನಗಳಿಗೆ ಮಾತ್ರ ಅವಕಾಶವಿದೆ.
ಬರಹಗಳು ಸ್ವತಂತ್ರವಾಗಿದ್ದು ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು.
ಅನುವಾದ, ಅನುಸೃಷ್ಟಿ, ಪ್ರೇರಣೆ, ಸ್ಫೂರ್ತಿ ಪಡೆದ ಲೇಖನಗಳಿಗೆ ಅವಕಾಶವಿಲ್ಲ.
ಎಲ್ಲ ಬರಹಗಳೂ 1500 ಪದಗಳ ಮಿತಿಯನ್ನು ದಾಟುವಂತಿಲ್ಲ.
ಇಲ್ಲಿ ಲಿಂಗ, ಜಾತಿ, ಪ್ರದೇಶ, ಎಡ-ಬಲ ಸೇರಿದಂತೆ ಯಾವುದೇ ಬಗೆಯ ಮೀಸಲಾತಿಯಿರುವುದಿಲ್ಲ.
ಬರಹಗಳ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ.
ಬರಹಗಳ ಸಾಫ್ಟ್ ಕಾಪಿಯನ್ನು ಸಂಪಾದಕರ ವಾಟ್ಸಪ್ ನಂ.ಗೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
ಬರಹಗಳನ್ನು ಕಲಿಸಲು ಕೊನೆಯ ದಿನಾಂಕ 10 ಏಪ್ರಿಲ್ 2026.
ಹೆಚ್ಚಿನ ಮಾಹಿತಿಗಾಗಿ ಸಂಪಾದಕ ಶ್ರೀ ಸೋಮನಾಥ ಶೇಷಗಿರಿಯವರನ್ನು ಸಂಪರ್ಕಿಸಿ. ಮೊಬೈಲ್ ಸಂಖ್ಯೆ : 8197899849
