ಬೆಂಗಳೂರು : ಚೇತನ ಪ್ರತಿಷ್ಠಾನ ಧಾರವಾಡ ಮತ್ತು ಗಡಿನಾಡ ಕನ್ನಡ ಸಾಂಸ್ಕೃತಿಕ ಸೇವಾ ಸಂಸ್ಥೆ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ 77ನೇ ಗಣ ರಾಜ್ಯೋತ್ಸವದ ಅಂಗವಾಗಿ ‘ಜನ ಗಣ ಮನ’ ಯಕ್ಷಗಾನ ನೃತ್ಯ, ಗೀತಗಾಯನ, ಬಹುಭಾಷಾ ಭಾವೈಕ್ಯತಾ ಕಾವ್ಯವಾಚನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 24 ಜನವರಿ 2026ರಂದು ಬೆಂಗಳೂರು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಲೇಖಕಿ ಡಾ. ಶ್ವೇತಾ ಪ್ರಕಾಶ್ ಇವರು ಉದ್ಘಾಟಿಸಲಿದ್ದು, ಸಾಹಿತಿ ಡಾ. ಚಂದ್ರಶೇಖರ ಮಾಡಲಗೇರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ಮಹೇಂದ್ರ ಮುಣ್ಣೋತ ಇವರ ಘನ ಉಪಸ್ಥಿತಿಯಲ್ಲಿ ಖ್ಯಾತ ಚಲನಚಿತ್ರ ಗೀತ ರಚನೆಕಾರರಾದ ಡಾ. ವಿ. ನಾಗೇಂದ್ರ ಪ್ರಸಾದ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತ ಸೇವಾರತ್ನ ಪ್ರಶಸ್ತಿ, ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಜ್ಞಾನ ಭಾರತಿ ರಾಷ್ಟ್ರೀಯ ಶಿಕ್ಷಕ/ಕಿ ಪ್ರಶಸ್ತಿ ಪ್ರದಾನ ನಡೆಯಲಿದೆ.

