ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇದರ ವತಿಯಿಂದ ವೆಂಟನಾ ಪೌಂಡೇಶನ್ ಸಹಯೋಗದಲ್ಲಿ ಆಯೋಜಿಸುತ್ತಿರುವ ‘ಜನಪದ’ ದೇಶೀಯ ಕಲೆಗಳ ಸರಣಿ 18 ಮತ್ತು 19 ಕಾರ್ಯಾಗಾರವನ್ನು ದಿನಾಂಕ 28 ಫೆಬ್ರವರಿ 2026 ಮತ್ತು 01 ಮಾರ್ಚ್ 2026ರಂದು ಉಡುಪಿಯ ವಾಸು ಏಜೆನ್ಸೀಸ್ ಬಳಿ ಬಡಗುಪೇಟೆಯ 10.03.28 ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯ ವೆಂಟನಾ ಪೌಂಡೇಶನ್‌ನ ಶ್ರೀಮತಿ ಶಿಲ್ಪಾ ಭಟ್‌ರವರು ಈ ಕಾರ್ಯಾಗಾರವನ್ನು ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಸೀರೆಯ ವಸ್ತ್ರ ವಿನ್ಯಾಸಕಿ ಮಮತಾ ರೈ ಭಾಗವಹಿಸಲಿದ್ದು, ಭಾವನಾ ಫೌಂಡೇಶನ್‌ನ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಇವರು ಉಪಸ್ಥಿತರಿರುವರು.
ಸರಣಿಯ ಹದಿನೆಂಟನೆಯ ದೇಶೀಯ ಕಲಾ ಕಾರ್ಯಾಗಾರದಲ್ಲಿ ಬಟ್ಟೆಯ ಮೇಲೆ ರಚಿಸಲ್ಪಡುವ ‘ಗುಜರಾತ್‌ನ ಕಲಂಕಾರಿ’ ಮತ್ತು ಸರಣಿ ಹತ್ತೊಂಭತ್ತರಲ್ಲಿ ‘ಮಾತಾ ನಿ ಪಚೇಡಿ’ ಚಿತ್ರಕಲೆಯನ್ನು ಕಲಾವಿದರಾದ ಜಗದೀಶ್ ಚಿತಾರ ಹಾಗೂ ಮನೆಯವರು ಕಲಿಸಿಕೊಡಲಿದ್ದಾರೆ. ಈ ಕಲೆಯನ್ನು ಪರಿಚಯಿಸುವ ಈ ಕಾರ್ಯಾಗಾರಕ್ಕೆ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ 98456 50544 ಯವರನ್ನು ಸಂಪರ್ಕಿಸಬಹುದು. ನೋಂದಣಿ ಶುಲ್ಕ ಒಂದು ದಿನಕ್ಕೆ ರೂ.1,200/- ಆಗಿರುತ್ತದೆ.


