ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷ ಪ್ರತಿಭೆ (ರಿ.) ಮಂಗಳೂರು ಇವರ ಸಹಯೋಗದಲ್ಲಿ ತುಳು ಯಕ್ಷಗಾನ ಪ್ರಸಂಗಗಳ ಭೀಷ್ಮ ಎಂದು ಖ್ಯಾತರಾಗಿದ್ದ ಕೆ. ಅನಂತರಾಮ ಬಂಗಾಡಿ ಇವರ ಸಂಸ್ಮರಣಾ ಗೋಷ್ಠಿ ಹಾಗೂ ತುಳು ಯಕ್ಷಗಾನ ಪ್ರದರ್ಶನವು ದಿನಾಂಕ 11 ಜನವರಿ 2026ರಂದು ಅಪರಾಹ್ನ ಗಂಟೆ 3-00ಕ್ಕೆ ಉರ್ವಸ್ಟೋರಿನ ತುಳು ಭವನದ ಸಿರಿಚಾವಡಿಯಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ ಇವರು ‘ತುಳು ಯಕ್ಷಗಾನ ಪ್ರಸಂಗಗಳಿಗೆ ಅನಂತರಾಮ ಬಂಗಾಡಿಯವರ ಕೊಡುಗೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಅಧ್ಯಕ್ಷತೆ ವಹಿಸುವರು. ಮ್ಯಾಪ್ಸ್ ಕಾಲೇಜಿನ ಉಪಪ್ರಾಂಶುಪಾಲ ಡಾ. ಪ್ರಭಾಕರ ನೀರುಮಾರ್ಗ ಮತ್ತು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ ಇವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಚಾರಗೋಷ್ಠಿಯ ಬಳಿಕ ಯಕ್ಷ ಪ್ರತಿಭೆ ಸಂಸ್ಥೆಯ ಸಂಚಾಲಕ ಸಂಜಯ್ ಕುಮಾರ್ ಗೋಣಿಬೀಡು ಇವರ ಸಂಯೋಜನೆಯಲ್ಲಿ ‘ಸಿರಿಕೃಷ್ಣೆ-ಚಂದ್ರಪಾಲಿ’ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ.

