ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಿಶು ದಿನಾಚರಣೆಯನ್ನು ದಿನಾಂಕ 14 ನವೆಂಬರ್ 2024 ರಂದು ಆಚರಿಸಲಾಯಿತು. ಇದೇ ಸಂದರ್ಭದಲಿ ಹಿಂದಿ ಸಾಹಿತ್ಯ ಬಿರುದಾಂಕಿತ ಬರಹಗಾರ, ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಕೆ. ವಿ. ಕುಮಾರನ್ ಮಾಸ್ಟರ ಇವರನ್ನು ಕೇರಳ ಚಿನ್ಮಯಮಿಷನ್ ಇದರ ಅಧ್ಯಕ್ಷ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಮುಖ್ಯಸ್ಥರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಅನಂತರ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಕೆ.ವಿ ಕುಮಾರನ್ ಮಾಸ್ಟರ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಕಿರುಚಲನ ಚಿತ್ರ’ವನ್ನು ಬಿಡುಗಡೆಗೊಳಿಸಲಾಯಿತು. ಅನಂತರ ಶಿಶು ದಿನಾಚರಣೆಯ ಅಂಗವಾಗಿ ಅಧ್ಯಾಪಕ ವೃಂದದವರಿಂದ ಮೂಡಿ ಬಂದ ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಮಾತಾಜಿ ದಿಶಾ ಚೈತನ್ಯ, ಚಿನ್ಮಯ ಮಿಷನ್ ಇದರ ಅಧ್ಯಕ್ಷ ಎ. ಕೆ. ನಾಯರ್, ಕಾರ್ಯಕದರ್ಶಿ ಕೆ. ಬಾಲಚಂದ್ರನ್, ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕೆ. ಸಿ.,ಉಪ ಪ್ರಾಂಶುಪಾಲರಾದ ಪ್ರಶಾಂತ ಬಿ., ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಪೂರ್ಣಿಮಾ ಎಸ್. ಆರ್., ಶ್ರೀಮತಿ ಸಿಂಧು ಶಶಿಂದ್ರನ್, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
“ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಜೇತರಾದ ಕೆ. ವಿ. ಕುಮಾರನ್ ಮಾಸ್ಟರ್ ಇವರಿಗೆ ಚಿನ್ಮಯ ವಿದ್ಯಾಲಯದಲ್ಲಿ ಅಭಿನಂದನೆ “
Next Article ಪರಿಚಯ ಲೇಖನ | ಅಭಿಜಾತ ಗುರುವರ ಡಾ. ಜಿ.ಎಲ್. ಹೆಗಡೆ !