ಮಂಗಳೂರು: ಕಟೀಲು ಮೇಳದಲ್ಲಿ ನಿರಂತರ 42 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಹಿರಿಯ ಯಕ್ಷಗಾನ ವೇಷಧಾರಿ ಶ್ರೀಧರ ಪಂಜಾಜೆ ಅವರಿಗೆ ‘ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ’ ನೀಡಿ ಸಂಮಾನಿಸಲಾಯಿತು.
ಬೆಂಗಳೂರಿನ ಡಾ. ಬಿ. ನಿಶಾಕಾಂತ ಶೆಟ್ಟಿ ಅವರ ಶ್ರೀ ಕಟೀಲು ಮೇಳದ ಸೇವೆ ಆಟದ ಸಂಧರ್ಭದಲ್ಲಿ, ಹಿರಿಯ ಹವ್ಯಾಸಿ ತಾಳಮದ್ದಳೆ ಕಲಾವಿದ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-05-2023ರಂದು ಸಂಜೆ 6 ಗಂಟೆಯಿಂದ ಕದ್ರಿ ಕಂಬಳಗುತ್ತು ಮಂಗಳೂರಿನಲ್ಲಿ ಜರಗಿತು.
ಡಾ. ಸುಧಾಕರ ಮಾರ್ಲ ಪಂಜಾಜೆ ಅವರನ್ನು ಅಭಿನಂದಿಸಿದರು. ಹಿರಿಯ ವಿದ್ವಾಂಸ ಡಾ. ಎಮ್. ಪ್ರಭಾಕರ ಜೋಶಿ, ಪ್ರದೀಪ ಕುಮಾರ ಕಲ್ಕೂರ, ಆಸ್ಪ ಲ್ಯಾಂಪ್ ನ ಸುರೇಶ ಬಿ. ಶೆಟ್ಟಿ, ಬಿ.ವಿ. ಹೆಗ್ಡೆ ಶಿರಸಿ, ಸುರೇಶ ವಿ. ಹೆಗ್ಡೆ, ಇಂದ್ರಾಳಿ ಶಿವರಾಮ್ ಶೆಟ್ಟಿ, ಬಾಳ ತಿಮ್ಮಪ್ಪ ಶೆಟ್ಟಿ, ಶಿರ್ವಕೋಡು ದಿನೇಶ್ ಹೆಗ್ಡೆ, ಸುಧಾಕರ ರಾವ್ ಪೇಜಾವರ, ಎಲ್ಲೂರು ರಾಮಚಂದ್ರ ಭಟ್, ಚೈತ್ರ ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು. ಕದ್ರಿ ಕಂಬಳ ಗುತ್ತು ನವನೀತ ಶೆಟ್ಟಿ ಅವರು ನಿರೂಪಿಸಿದರು.
ಕಟೀಲು ಮೇಳದವರಿಂದ “ತ್ರಿಮೂರ್ತಿ ಕಲ್ಯಾಣ” ಯಕ್ಷಗಾನ ಬಯಲಾಟ ನಡೆಯಿತು. ಬೆಂಗಳೂರು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಉಪೇಂದ್ರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದು, ವೈದ್ಯಕೀಯ ಸೇವೆಯೊಂದಿಗೆ ಕಲಾ ಪೋಷಣೆ ಮಾಡುತ್ತಿರುವ ನಿಶಾಕಾಂತ ಶೆಟ್ಟಿ ಅವರ ಯಕ್ಷಗಾನ ಅಭಿರುಚಿಯನ್ನು ಶ್ಲಾಘಿಸಿದರು.