ಮಂಗಳೂರು: ಸಂಗೀತ ವಿದ್ಯಾನಿಲಯದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ‘ಸಂಗೀತೋತ್ಸವ’ವು ದಿನಾಂಕ 03-12-2023ರಂದು ಡಾನ್ ಬೊಸ್ಕೋ ಹಾಲ್ ಮತ್ತು ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 88ನೇ ವಾರ್ಷಿಕೋತ್ಸವದ ಪ್ರಯುಕ್ತ ‘ನೃತ್ಯೋತ್ಸವ’ವು ದಿನಾಂಕ 10-12-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪ್ರಸ್ತುತಗೊಳ್ಳಲಿದೆ.
ದಿನಾಂಕ 03-12-2023ರಂದು ಗಂಟೆ 2.30ಕ್ಕೆ ವಿದುಷಿ ಶ್ರೀಮತಿ ಉಷಾ ಪ್ರವೀಣ್ ಮತ್ತು ಶ್ರೀಮತಿ ನಿಶ್ವೀತಾ ಶರಣ್ ಇವರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಶ್ರೀ ಮನೋಹರ್ ರಾವ್ ಮತ್ತು ವಯೋಲಿನ್ ನಲ್ಲಿ ಉಡುಪಿಯ ವಿದ್ವಾನ್ ಶ್ರೀಧರ್ ಅಚಾರ್ ಪಾಡಿಗಾರ ಸಾಥ್ ನೀಡಲಿದ್ದಾರೆ. ಗಂಟೆ 5ಕ್ಕೆ ಮೈಸೂರಿನ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಮತ್ತು ವಿದುಷಿ ನಿತ್ಯಶ್ರೀ ಆರ್. ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ವಿದ್ವಾನ್ ಕೆ.ಎಚ್. ರವಿಕುಮಾರ್ ಮೃದಂಗದಲ್ಲಿ ಮತ್ತು ಕಾಸರಗೋಡಿನ ವಿದ್ವಾನ್ ಗಣರಾಜ ಕಾರ್ಲೆ ವಯೋಲಿನ್ ಸಾಥ್ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ಇದರ ನಿರ್ದೇಶಕರಾದ ಪ್ರೊ. ಕೆ. ರಾಮಮೂರ್ತಿ ರಾವ್ ಮತ್ತು ಕಲಾವಿದರಾದ ಇಸ್ಟರ್ ನೊರೊನ್ಹಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ನಂತರ ಇಸ್ಟರ್ ನೊರೊನ್ಹಾ ಮತ್ತು ಕದ್ರಿ ಸಂಗೀತ ವಿದ್ಯಾನಿಲಯದ ತಂಡದವರಿಂದ ಸಂಗೀತ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 10-12-2023ರಂದು ಗಂಟೆ 5ಕ್ಕೆ ನಾಟ್ಯ ವಿಶಾರಾದ ಗುರುಕುಲ ಭೂಷಣ ಇದರ ವಿದ್ಯಾರ್ಥಿಗಳಿಂದ, ವಿದ್ವಾನ್ ಶ್ರೀ ಯು.ಕೆ. ಪ್ರವೀಣ್ ಮತ್ತು ವಿದುಷಿ ನಿಶ್ವೀತಾ ಶರಣ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಹಿರಿಯ ಪತ್ರಕರ್ತರಾದ ಶ್ರೀ ಮನೋಹರ್ ಪ್ರಸಾದ್ ಮತ್ತು ಮಹಾರಾಷ್ಟ್ರದ ಕೆ.ಸಿ.ಇ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ವೈ. ಸುಬ್ರಹ್ಮಣ್ಯ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಂಜೇಶ್ವರದ ನಾಟ್ಯ ಕಲಾ ಸಿಂಧು ವಿದ್ವಾನ್ ಬಾಲಕೃಷ್ಣ ಬಿ. ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.