ಮುಳ್ಳೇರಿಯ: ಮುಳ್ಳೇರಿಯಾದ ‘ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಗ್ರಂಥಾಲಯ’ ಆಯೋಜಿಸಿದ ‘ಕಯ್ಯಾರ ಕೃತಿ ಸಂಚಾರ’ ಎಂಬ ಕಾರ್ಯಕ್ರಮ ದಿನಾಂಕ 07 ಮಾರ್ಚ್ 2025 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕತೆಗಾರ ಹಾಗೂ ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಮಾತನಾಡಿ “ಮುಳ್ಳೇರಿಯ ಕಯ್ಯಾರರ ಕಾವ್ಯದಲ್ಲಿ ವ್ಯಷ್ಟಿ ಪ್ರಜ್ಞೆಯು ಸಮಷ್ಟಿ ಪ್ರಜ್ಞೆಯಾಗಿ ವಿಸ್ತರಿಸಿಕೊಳ್ಳುತ್ತದೆ. ಬಡವ ಬಲ್ಲಿದರೆಲ್ಲರೂ ಒಂದೇ ಎಂಬ ಸಮಾನತೆಯ ತತ್ವವನ್ನು ಸಾರಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿದ ಅವರು ತಮ್ಮ ಕವಿತೆಗಳಲ್ಲಿ ದೇಶಭಕ್ತಿಯನ್ನು ಮುಖ್ಯವಾಗಿಟ್ಟುಕೊಂಡಂತೆ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಗಂಭೀರ ಪರಿಸ್ಥಿತಿಯ ಬಗ್ಗೆ ಕಯ್ಯಾರರು ಹೇಳಿದ ವಿಚಾರಗಳನ್ನು ದೇಶದ ಸಮಸ್ಯೆಗಳ ಹಿನ್ನೆಯಲ್ಲೂ ಪರಿಭಾವಿಸಬಹುದು. ಅವರ ಕವಿತೆಗಳು ಅನುಭವಜನ್ಯವಾಗಿದ್ದು ಪರಿಣಾಮಕಾರಿಯಾಗಿವೆ. ಪ್ರಾದೇಶಿಕ ಸಾಂಸ್ಕೃತಿಕ ಚಿತ್ರಣವನ್ನು ಕೊಡುವುದರೊಂದಿಗೆ ಸಾರ್ವಕಾಲಿಕ ಮೌಲ್ಯಗಳ ಕಡೆಗೆ ಬೆಳಕು ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು.
ಬರಹಗಾರ ರಾಘವನ್ ಬೆಳ್ಳಿಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ರಾಧಕೃಷ್ಣ ಉಳಿಯತ್ತಡ್ಕ ಉದ್ಘಾಟಿಸಿದರು. ಲೇಖಕರಾದ ಸುಂದರ ಬಾರಡ್ಕ, ಮಲಯಾಳಂ ಕವಿ ರವೀಂದ್ರನ್ ಪಾಡಿ, ಕುಞ್ಞoಬು ಮಾಸ್ತರ್ ಮತ್ತು ಚಂದ್ರನ್ ಇವರು ಕಯ್ಯಾರರ ಕುರಿತು ಮಾತನಾಡಿದರು. ಶಿಕ್ಷಕ ಕೆ. ಕೆ. ಮೋಹನನ್ ಸ್ವಾಗತಿಸಿ, ಕೆ. ಗೋವಿಂದನ್ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Article2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರಕಟ
Next Article ಯಕ್ಷಗಾನ ಕಲಾವಿದ ಪಾಡಿಗಾರು ಲಕ್ಷ್ಮೀನರಸಿಂಹ ಉಪಾಧ್ಯ ನಿಧನ.