ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್ (ರಿ.) ದಂಡಿನಶಿವರ ಆಯೋಜಿಸುವ ‘ಕಾಕನ ಕೋಟೆ’ ನಾಟಕ ಪ್ರದರ್ಶನವನ್ನು ದಿನಾಂಕ 24 ಮಾರ್ಚ್ 2026ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಮುಚ್ಚಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗದರ್ಶನ ಪ್ರದರ್ಶನ ಕಲಾ ಕೇಂದ್ರ ಅಭಿನಯಿಸುವ ಈ ನಾಟಕದ ರಚನೆ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರು ಮಾಡಿದ್ದು, ಮೈಕೊ ಶಿವಶಂಕರ್ ಇವರು ನಿರ್ದೇಶನ ಮಾಡಿರುತ್ತಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಸಿ.ಕೆ. ಗುಂಡಣ್ಣ ಇವರು ನೆರವೇರಿಸಲಿದ್ದು, ಸಿನಿಮಾ ನಿರ್ದೇಶಕ ಸಾಹಿತಿ ಮತ್ತು ಸಂಗೀತ ಸಂಯೋಜಕರಾದ ಗಂಧರ್ವ ರಾಯರಾವುತ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗಕರ್ಮಿ ಶಶಿಕಾಂತ ಯಡಹಳ್ಳಿ ಇವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಗುವುದು.


