ಮಂಗಳೂರು: ಮಂಗಳೂರಿನ ಪೋಲೀಸ್ ಲೈನ್ ಶ್ರೀದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಶುಭ ಸಂದರ್ಭದಲ್ಲಿ ರಜತ ಸಂಭ್ರಮದಲ್ಲಿರುವ ಕೋಡಿಕಲ್ ಇಲ್ಲಿನ ಸರಯೂ ಯಕ್ಷ ವೃಂದ (ರಿ) ಇದರ ಕಲಾವಿದರಿಂದ ‘ಶೂರ್ಪನಖಾ ವಧೆ’ ಎಂಬ ಪ್ರಸಂಗದ ಬಯಲಾಟ ದಿನಾಂಕ 05 ಅಕ್ಟೋಬರ್ 2024 ರಂದು ನಡೆಯಿತು.
ಇದೇ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳದ ಗುರು ಯಕ್ಷಗಾನ ಸವ್ಯಸಾಚಿ ವಳಕುಂಜ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಇವರಿಗ ಸನ್ಮಾನ ಹಾಗೂ ಬಾಲ ಕಲಾವಿದ ಮಾ. ದೃಶಾಲ್ ಪೂಜಾರಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಳದ ಅಧ್ಯಕ್ಷ ಶ್ರೀ ಮಯೂರ್ ಉಳ್ಳಾಲ್, ನ್ಯಾಯವಾದಿಗಳಾದ ಕುಶಾಲಪ್ಪ, ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಡಾ. ನಂದಿನಿ ಹಾಗೂ ದೇವಿ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ಕಾದಂಬರಿ ‘ಝವಾದಿ’