19 ಫೆಬ್ರವರಿ 2023, ಮಂಗಳೂರು: ಸಂಸ್ಕೃತಿಯ ಪ್ರತೀಕ ಯಕ್ಷಗಾನ ಕಲೆ: ಡಾ. ತಲ್ಲೂರು ಶಿವರಾಮ ಶೆಟ್ಟಿ
ಮಂಗಳೂರು: ನಗರದ ಪುರಭವನದಲ್ಲಿ ನಡೆದ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಇದರ ದಶಮಾನೋತ್ಸವದ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಡಾ. ತಲ್ಲೂರು ಶಿವರಾಮ ಶೆಟ್ಟಿ ಉಡುಪಿ ಅವರು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಿ, ಬಾಲಕಲಾವಿದರನ್ನು ಪುರಸ್ಕರಿಸುವುದು ಕಲೆಯ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯ ಕಾರ್ಯವಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕ ಯಕ್ಷಗಾನ ಕಲೆ. ಇದನ್ನು ಪ್ರೇರೇಪಿಸಿ ಬೆಳೆಸುವಲ್ಲಿ ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಪಾತ್ರದ ಬಗ್ಗೆ ಮೆಚ್ಚಿಗೆ ಸೂಚಿಸಿದರು.
ಯಕ್ಷಗಾನ ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನ ಕಲೆ ಉಳಿದು ಬೆಳೆಯಲು ಕಲಾವಿದರು, ಸಂಘಟಕರು, ಪೋಷಕರು ಮತ್ತು ಪ್ರೇಕ್ಷಕರು ಕೂಡಿದಾಗ ಮಾತ್ರ ಸಾಧ್ಯ ಎಂದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಪಾಲಕರು ಕರೆ ತರಬೇಕು. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಪ್ರಸಿದ್ಧ ಯಕ್ಷಗಾನ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಇವರನ್ನು ಕಲಾಸಂಗಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕದ್ರಿ ನವನೀತ ಶೆಟ್ಟಿ ಅಭಿನಂದನ ನುಡಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಕೇಶವ ಹೆಗಡೆ ಮಾತನಾಡಿದರು. ರವಿ ಅಲೆವೂರಾಯ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಶ್ರೀಯಕ್ಷಗಾನ ಕಲಾಮೇಳ ಶಿರಸಿ ಇವರಿಂದ `ಭಸ್ಮಾಸುರ-ಮೋಹಿನಿ’ ಎಂಬ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಿತು.
Subscribe to Updates
Get the latest creative news from FooBar about art, design and business.
Previous Articleಅಬ್ಬಕ್ಕ ಪೀಠದಿಂದ ಏಕಾಂಕ ನಾಟಕ ಸ್ಪರ್ಧೆ – ಮಾರ್ಚ್ 18ಕ್ಕೆ
Next Article ಮಂಗಳೂರು ಲಿಟ್ ಫೆಸ್ಟ್ 2023ನಲ್ಲಿ ರಿಷಬ್ ಶೆಟ್ಟಿ