Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ

    February 5, 2026

    ಉದ್ಯಾವರದ ಸರಕಾರಿ ಕಾಲೇಜಿನಲ್ಲಿ ಬಹುಭಾಷಾ ನಿರಂತರ್ ನಾಟಕೋತ್ಸವ | ಫೆಬ್ರವರಿ 05ರಿಂದ 08

    February 4, 2026

    ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆ | ಫೆಬ್ರವರಿ 05

    February 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಲೇ.ವಾ.ದಲ್ಲಿ ‘ಸರಸ ಸಮರಸ’ ಲೋಕಾರ್ಪಣೆ | ಮೇ 21ಕ್ಕೆ
    Book Release

    ಕ.ಲೇ.ವಾ.ದಲ್ಲಿ ‘ಸರಸ ಸಮರಸ’ ಲೋಕಾರ್ಪಣೆ | ಮೇ 21ಕ್ಕೆ

    May 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘದಲ್ಲಿ ದಿನಾಂಕ 21-05-2023ರಂದು ಅಪರಾಹ್ನ ಗಂಟೆ 2-30ಕ್ಕೆ ಕಾಸರಗೋಡಿನ ಪ್ರಬುದ್ಧ ಲೇಖಕಿ ಶ್ರೀಮತಿ ಶೀಲಾಲಕ್ಷ್ಮೀಯವರ ‘ಸರಸ ಸಮರಸ’ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ರಶ್ಮಿ ಅರಸ್ ಅವರ ಆಶಯ ಗೀತೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮವು ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ಲೇಖಕಿ ಬಿ. ಸತ್ಯವತಿ ಭಟ್ ಕೊಳಚಪ್ಪು ಕೃತಿ ಲೋಕಾರ್ಪಣೆ ಮಾಡುವರು. ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಶೈಲಜಾ ಕೆ. ಲೋಕಾರ್ಪಣೆಗೊಂಡ ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು ಉಪಸ್ಥಿತರಿರುತ್ತಾರೆ. ಸ್ವಾಗತ ಮತ್ತು ಪ್ರಸ್ತಾವನೆ ಶ್ರೀಮತಿ ಆಕೃತಿ ಎಸ್. ಭಟ್ ಮತ್ತು ಶ್ರೀಮತಿ ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.

    ಕ.ಲೇ.ವಾ.ದ ಬಗ್ಗೆ ಎರಡು ಮಾತು :
    ದ.ಕ. ಜಿಲ್ಲೆ ಮತ್ತು ಕಾಸರಗೋಡಿನ ಲೇಖಕರು ಮತ್ತು ಸಾಹಿತ್ಯಾಸಕ್ತರನ್ನು ಒಳಗೊಂಡ ಒಂದು ಸಂಘಟನೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ. ಇದು ಸ್ವಂತ ನೆಲೆಯನ್ನು ಹೊಂದಿದ ತೃಪ್ತಿಯೊಂದಿಗೆ ಮೂವತ್ತೈದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಅನೇಕ ಬರಹಗಾರರ ಅನೇಕ ಕೃತಿಗಳು ಇಲ್ಲಿ ಲೋಕಾರ್ಪಣೆಗೊಂಡಿವೆ. ಬರವಣಿಗೆಯಲ್ಲಿ ಆಸಕ್ತಿಯೊಂದಿ ಚಿಗುತ್ತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಇಲ್ಲಿ ನಡೆಯುತ್ತದೆ. ಗಾಯನ, ನಟನೆ, ವಾಚನಕ್ಕೆ ಸಂದರ್ಭೋಚಿತವಾಗಿ ಅವಕಾಶ ಕಲ್ಪಿಸಿ ಕೊಡುವ ವಿಚಾರ ಶ್ಲಾಘನೀಯ. ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡಿದ ಹಲವು ಪ್ರತಿಷ್ಟಿತರು ಈ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈಗ ಸಾಹಿತ್ಯದ ಹಲವು ಮಗ್ಗಲುಗಳಲ್ಲಿ ಕೈಯಾಡಿಸಿದ ಡಾ. ಜ್ಯೋತಿ ಚೇಳ್ಯಾರು ಇವರ ಸಮರ್ಥ ಅಧ್ಯಕ್ಷತೆಯಲ್ಲಿ ಸದಸ್ಯೆಯರ ಪ್ರೀತಿ ಸಹಕಾರದೊಂದಿಗೆ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮುಂದುವರಿಯುತ್ತಿದೆ.

    ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು:
    ಶೀಲಾಲಕ್ಷ್ಮೀಯವರು ಇಂಗ್ಲಿಷ್ ಸಾಹಿತ್ಯದ ಪದವೀಧರೆ ಮತ್ತು ಇತ್ತೀಚೆಗೆ ತಮ್ಮ ಅರುವತ್ತನೇ ವಯಸ್ಸಿನಲ್ಲಿ ಕನ್ನಡ ಸಾಹಿತ್ಯದಲ್ಲೂ ಪದವಿಯನ್ನು ಪಡೆದದ್ದು ಇವರ ವಿಶೇಷತೆ. ಲಘು ಬರೆಹ, ಕಥೆ, ಕಾದಂಬರಿಗಳನ್ನು ಬರೆಯುವುದು ಇವರ ಹವ್ಯಾಸ. ಸರಸ-ಸಮರಸ ಕಾದಂಬರಿ ಅವರ ಮೂರನೇ ಕೃತಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ 2008ನೇ ಸಾಲಿನ ಪ್ರಶಸ್ತಿ ವಿಜೇತೆಯಾದ ಇವರು ಗೃಹಿಣಿಯಾಗಿದ್ದಾರೆ. ಪ್ರಾದೇಶಿಕೆ ಪತ್ರಿಕೆಯಲ್ಲಿ ಸುಮಾರು ಒಂದು ವರ್ಷ ಕಾಲ ಅಂಕಣ ಬರಹಗಾರ್ತಿಯಾಗಿ ಮತ್ತು ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು ಬೆಳಕು ಕಂಡಿವೆ. ಪ್ರತಿಲಿಪಿ ಪೋರ್ಟಲ್ ಕನ್ನಡ ವಿಭಾಗದಲ್ಲಿ ಇವರು ಶೀಲಾಲಕ್ಷ್ಮೀ (ಶೀಲಾಶಂಕರ್) ಹೆಸರಲ್ಲಿ ಖಾಯಂ ಬರೆಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ‘ಸರ್ವಾಂಗ ಶುದ್ಧ ಪ್ರಬುದ್ಧ ವೇಷಧಾರಿ’ – ಗಿಳಿಯಾರು ಗೋಪಾಲಕೃಷ್ಣ ಪೈ
    Next Article ಕಡಬದಲ್ಲಿ ‘ತಾಳ ಕಾರ್ಯಗಾರ’
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆ | ಫೆಬ್ರವರಿ 05

    February 4, 2026

    ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಾಟಕ ಮಹೋತ್ಸವ ಮತ್ತು ಪ್ರಶಸ್ತಿ ಪ್ರದಾನ

    February 4, 2026

    ಬಳ್ಳಾರಿಯ ಕನ್ನಡ ಭವನದಲ್ಲಿ ಪುಸ್ತಕ ಲೋಕಾರ್ಪಣೆ | ಫೆಬ್ರುವರಿ 08

    February 4, 2026

    ಡಾ. ಸುಂದರ ಕೇನಾಜೆಯವರ ‘ಮಾತಿಲ್ಲದ ಮಾತು’ ಕೃತಿ ಬಿಡುಗಡೆ ಮತ್ತು ಪುಸ್ತಕ ಪ್ರದರ್ಶನ

    February 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.