ಪುತ್ತೂರು : ಎಸ್.ಡಿ.ಪಿ. ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಮತ್ತು ಎಸ್.ಡಿ.ಪಿ. ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಇದರ ವತಿಯಿಂದ ‘ಕಲೋಪಾಸನಾ 2026’ 22ನೇ ವರ್ಷದ ಸಾಂಸ್ಕೃತಿಕ ಕಲಾ ಸಂಭ್ರಮವನ್ನು ದಿನಾಂಕ 31 ಜನವರಿ 2026ರಿಂದ 02 ಫೆಬ್ರುವರಿ 2026ರವರೆಗೆ ಸಂಜೆ 6-00 ಗಂಟೆಗೆ ಎಸ್.ಡಿ.ಪಿ. ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 31 ಜನವರಿ 2026ರಂದು ಈ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಅನಹಿತ ಮತ್ತು ಅಪೂರ್ವ ಚೆನೈ ಇವರ ಹಾಡುಗಾರಿಕೆಗೆ ವಿದ್ವಾನ್ ಎಲ್. ರಾಮ ಕೃಷ್ಣನ್ ವಯಲಿನ್, ವಿದ್ವಾನ್ ದಿಲ್ಲಿ ಸಾಯಿರಾಮ್ ಮೃದಂಗ ಮತ್ತು ವಿದ್ವಾನ್ ಜಿ. ಎಸ್. ರಾಮಾನುಜಂ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 01 ಫೆಬ್ರುವರಿ 2026ರಂದು ಖ್ಯಾತ ಮಳಯಾಳಂ ಚಿತ್ರನಟಿ ನವ್ಯ ನಾಯರ್ ಇವರಿಂದ ಭರತನಾಟ್ಯ ಹಾಗೂ ದಿನಾಂಕ 02 ಫೆಬ್ರುವರಿ 2026ರಂದು ಶ್ರೀ ಹನುಮಗಿರಿ ಮೇಳದವರಿಂದ ‘ವರ್ಣ ಪಲ್ಲಟ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

