Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ‘ಮಾತು ಮದ್ದಳೆ’ ಅರ್ಥಗಾರಿಕೆಯ ವಿಶೇಷ ಜಿಜ್ಞಾಸೆ

    June 13, 2026

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ಕಲಾಂಗಣದಲ್ಲಿ ರಾಜ್ಯ ಮಟ್ಟದ ಸಿಮೆಂಟ್‌ ಶಿಲ್ಪ ಶಿಬಿರ ಆರಂಭ

    June 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ ‘ಕಲೋತ್ಸವ 2023’ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ 
    Cultural

    ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ ‘ಕಲೋತ್ಸವ 2023’ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ 

    August 23, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೋಶದ ಆಶ್ರಯದಲ್ಲಿ ‘ಕಲೋತ್ಸವ 2023’ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯು ಕಾಲೇಜಿನ ಎಲ್.ಎಫ್. ರಸ್ಕೀನ್ಹಾ ಸಭಾಂಗಣದಲ್ಲಿ ದಿನಾಂಕ 18-08-2023ರಂದು ನಡೆಯಿತು.

    ಮುಖ್ಯ ಅತಿಥಿಯಾಗಿದ್ದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಭರತನಾಟ್ಯ ಕಲಾವಿದ ಮೋಹನ್ ರಾಜ್ ಮಾತನಾಡಿ, ಕಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ತಾವು ಕಲಾರಂಗದಲ್ಲಿ ನಡೆದು ಬಂದ ತಮ್ಮ ಸಾಧನೆಗಳನ್ನು ತೆರೆದಿಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಮಾತನಾಡಿ, “ಸಂತ ಅಲೋಶಿಯಸ್ ಕಾಲೇಜು ಮಕ್ಕಳ ಕಲಾಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು” ಎಂದರು.

    ಕಾಲೇಜಿನ ಕುಲಸಚಿವ, ಡಾ. ಆಲ್ವಿನ್ ಡೇಸಾ, ವಿದ್ಯಾರ್ಥಿ ಸಂಘದ ನಾಯಕ ಕ್ರಿಸ್ಟನ್ ಜೋಶುವಾ ಮಿನೇಜಸ್ ಉಪಸ್ಥಿತರಿದ್ದರು. ಲೆನ್ವಿನ್ ಕಾರ್ಲ್ ನಿರೂಪಿಸಿದರು. ವಿದ್ಯಾರ್ಥಿ ಚಟುವಟಿಕೆ ಕೋಶದ ಡೀನ್ ಡಾ. ಈಶ್ವರ ಭಟ್ ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಕಲೋತ್ಸವ 2023ರ ಬಗ್ಗೆ ವಿವರಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಚಟುವಟಿಕೆ ಕಾರ್ಯದರ್ಶಿ ದಿಯಾ ಪದವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ಕವಿತಾ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ‘ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ’ | ಆಗಸ್ಟ್ 26ರಂದು  
    Next Article ಮಂಗಳೂರು ಥಂಡರ್ ಕಿಡ್ಸ್ ತಂಡದ ಮಕ್ಕಳ ಹಾಡುಗಳ ಬಿಡುಗಡೆ 
    roovari

    Add Comment Cancel Reply


    Related Posts

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ಕಲಾತಂಡ, ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 12

    June 9, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ನೀರ್ಚಾಲಿನಲ್ಲಿ ‘ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ’ | ಮೇ 31

    May 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.