ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟತಟ್ಟು, ಉಸಿರು ಕೋಟ, ಬ್ರಹ್ಮಾವರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಕುಂದಾಪ್ರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಸರೆಯಲ್ಲಿ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ 2025’ವನ್ನು ದಿನಾಂಕ 04 ಮೇ 2025ರಂದು ಬೆಳಗ್ಗೆ 9-00 ಗಂಟೆಗೆ ಕೋಟ ಡಾ. ಶಿವರಾಮ ಕಾರಂತ ಥೀಂ ಪಾರ್ಕ್ ಇಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 9-00 ಗಂಟೆಗೆ ಕಾಂಬ 01ರಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭವು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ ಇವರ ಅಧ್ಯಕ್ಷತೆಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಇವರ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಇವರು ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗಲಿದೆ. ಕುಂದಾಪ್ರ ಕನ್ನಡ ಚಿಂತಕರಾದ ಡಾ. ಅಣ್ಣಯ್ಯ ಕುಲಾಲ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿರುವರು. ಕಾಂಬ 02ರಲ್ಲಿ ಕವಿಗೋಷ್ಠಿ, ಕಾಂಬ 03ರಲ್ಲಿ ‘ತಾಳ್ಮೆ ಗಂಡ್ಮಕ್ಕಳಲ್ ಹೆಚ್ಚೋ ..? ಹೆಣ್ ಮಕ್ಕಲ್ ಹೆಚ್ಚೋ ..?’ ಎಂಬ ವಿಷಯದ ಬಗ್ಗೆ ಕುಂದಕನ್ನಡ ಹರಟೆ, ಕಾಂಬ 04ರಲ್ಲಿ ಅಧ್ಯಕ್ಷರೊಂದಿಗೆ ಮಾತುಕಥೆ ಮತ್ತು ಕಾಂಬ 05ರಲ್ಲಿ ಆನಂದ ಸಿ. ಕುಂದರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಚಿಂತಕರಾದ ಡಾ. ಬಾಲಕೃಷ್ಣ ಶೆಟ್ಟಿ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಚ್ಯುತ ಪೂಜಾರಿ ಕಾರ್ಕಡ, ರವಿ ಬನ್ನಾಡಿ, ಚಂದ್ರಕಾಂತ್ ಕಾರ್ಕಡ ಇವರಿಂದ ಕುಂದಗನ್ನಡ ಗೀತ ಗಾಯನ ಮತ್ತು ವಿಕಸನ ಶಿಬಿರದ ಶಿಬಿರಾರ್ಥಿಗಳಿಂದ ನೃತ್ಯ ವೈವಿಧ್ಯ ಪ್ರಸ್ತುತಗೊಳ್ಳಲಿದೆ.