ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ತಂಡ ಆಯೋಜಿಸಿದ 2ನೇ ಶ್ರೀ ರಾಧಾ ಅಷ್ಟಮಿ ಲಲಿತಕಲಾ ಸಾಂಸ್ಕೃತಿಕ ಉತ್ಸವ ಹಾಗೂ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಯಕ್ಷದೇಗುಲದ ಮಕ್ಕಳ ತಂಡದಿಂದ `ಕಂಸವಧೆ’ ಯಕ್ಷಗಾನ ಪ್ರದರ್ಶನ ದಿನಾಂಕ 12 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗುರು ಪ್ರಿಯಾಂಕ ಕೆ. ಮೋಹನರಿಗೆ ‘ಗಾಂಧರ್ವಿಕಾ ಪ್ರಶಸ್ತಿ–2024’ ನೀಡಿ ಗೌರವಿಸಲಾಯಿತು. ಬಳಿಕ ನಡೆದ ‘ಕಂಸವಧೆ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ, ಮದ್ದಲೆಯಲ್ಲಿ ಸಂಪತ್ ಕುಮಾರ್, ಚಂಡೆಯಲ್ಲಿ ಕಾರ್ತಿಕ್ ಧಾರೇಶ್ವರರವರು ಭಾಗವಹಿಸಿದರು. ಮುಮ್ಮೇಳದಲ್ಲಿ ಮಕ್ಕಳಾದ ಅನಿಕಾ, ಸರಸ್ವತಿ, ಸುಹಾಸ್ ಹೊಳ್ಳ, ಪ್ರತ್ಯೂಷಾ ಶೆಟ್ಟಿ, ಅನೀಶಾ, ಮಾನ್ಯ, ಶ್ರೀ ಗೌರಿ, ಧನ್ಯ ಮತ್ತು ಶಾಶ್ವತ ಹೊಳ್ಳ ಭಾಗವಹಿಸಿದರು. ರಂಗದ ಹಿಂದೆ ಸುದರ್ಶನ ಉರಾಳ, ಉದಯ ಬೋವಿ ಹಾಗೂ ಶ್ರೀರಾಮ ಹೆಬ್ಬಾರ್ ಸಹಕರಿಸಿದರು.