ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-91’ ಕಾರ್ಯಕ್ರಮದಡಿಯಲ್ಲಿ ‘ನಾಟಕಾಷ್ಟಕ’ದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 28 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಲಾಪೋಷಕ ಡಾ. ಆದರ್ಶ ಹೆಬ್ಬಾರ್ ಇವರನ್ನು ಗೌರವಿಸಿದ ಗುರುರಾಜ್ ಮಾತನಾಡಿ “ಗಳಿಸಿದ ಒಂದಂಶವನ್ನು ಕಲೆಗಾಗಿ ಮುಡಿಪಾಗಿಡುವ ಗುಣ ಹಲವರಲ್ಲಿರುವುದಿಲ್ಲ. ಪ್ರತಿಭಾನ್ವಿತ ಯಕ್ಷಗಾನಾಸಕ್ತ ಹಾಗೂ ಸಂಗೀತಾಸಕ್ತ ಡಾ. ಆದರ್ಶ ಹೆಬ್ಬಾರ್ ಕಲಾ ಪೋಷಕರಾಗಿ ಹೆಸರಾದವರು. ಶ್ವೇತಯಾನದಲ್ಲಿ ‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಸಾಲ್ವನ ಪಾತ್ರವನ್ನು ವಿಭಿನ್ನವಾಗಿ ರಂಗದಲ್ಲಿ ಕಟ್ಟಿಕೊಟ್ಟವರು. ಎಳವೆಯಲ್ಲಿ ಕಲಿತ ಹೆಜ್ಜೆಯನ್ನು ನಲವತ್ತು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ರಂಗವೇರಿ ಸೈ ಎನಿಸಿಕೊಂಡವರು. ಅವರ ಕಲೋತ್ಸಾಹ ನಿಜಕ್ಕೂ ಕಲಾಪ್ರಪಂಚಕ್ಕೆ ಆಸ್ತಿ ಎಂಬುದು ಜನಜನಿತವಾಗಿದೆ.” ಎಂದರು.
ಖ್ಯಾತ ರಂಗ ತಜ್ಞ ರಾಮಕೃಷ್ಣ ಹೇರ್ಳೆ, ನಟನ ರಂಗಶಾಲೆಯ ಚೇತನ್, ಬಿ. ವಿ. ಕಾರಂತ್ ಕೋಣಿ, ಸತ್ಯನಾರಾಯಣ ಅರಸರು, ರಂಗ ನಿರ್ದೇಶಕ ವಾಸು ಗಂಗೇರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಟನಾ ರಂಗ ಶಾಲೆ ಮೈಸೂರು ತಂಡದ ನಾಟಕ ‘ಕಣಿವೆಯ ಹಾಡು’ ಪ್ರಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.
Next Article ಪರಿಚಯ ಲೇಖನ | ‘ಯಕ್ಷ ಕಲಾ ಕನ್ಯೆ’ ಶ್ರೀರಕ್ಷಾ ಬಿ.
Related Posts
Comments are closed.