ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಮತ್ತು ಅಭಿರುಚಿ ಪ್ರಕಾಶನ ಆಯೋಜಿಸಿರುವ ಮಹೇಶ್ ಎಲಕುಂಚವಾರ್ ಅವರ ನಾಟಕ ‘ಪಾರ್ಟಿ’ ಕನ್ನಡಾನುವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 28 ಮಾರ್ಚ್ 2026ರಂದು ಸಂಜೆ 5-00 ಗಂಟೆಗೆ ಮೈಸೂರು ರಂಗಾಯಣದ ವನರಂಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ಚಿದಂಬರರಾವ್ ಜಂಬೆ, ಜಯಂತ ಕಾಯ್ಕಿಣಿ, ಡಿ.ಎಸ್. ಚೌಗಲೆ, ಸತೀಶ್ ತಿಪಟೂರು, ಅಭಿರುಚಿ ಗಣೇಶ್ ಇವರುಗಳು ಭಾಗವಹಿಸಲಿದ್ದಾರೆ.

